Monday, November 23, 2026
HomeBelagaviತೀವ್ರಗೊಂಡ 400 ಕೋಟಿ ರಾಬರಿ ಪ್ರಕರಣ

ತೀವ್ರಗೊಂಡ 400 ಕೋಟಿ ರಾಬರಿ ಪ್ರಕರಣ

ಬೆಳಗಾವಿ
ಕರ್ನಾಟಕ–ಗೋವಾ ಗಡಿಯಲ್ಲಿ ನಡೆದ 400 ಕೋಟಿ ರಾಬರಿ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ.
ಹಣ ಹೈಜಾಕ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಸರ್ಕಾರ, ಎಸ್‌ಐಟಿ ರಚಿಸಿ ತನಿಖೆಯನ್ನು ಚುರುಕುಗೊಳಿಸಿದೆ.
ತನಿಖೆಯ ವೇಳೆ ಬೆಚ್ಚಿ ಬೀಳುವ ಅಂಶಗಳು ಬೆಳಕಿಗೆ ಬಂದಿವೆ.
2000 ಮುಖಬೆಲೆಯ ನೋಟುಗಳು ಗುಜರಾತ್‌ನ ಪವರ್‌ಫುಲ್ ರಾಜಕಾರಣಿಯೊಂದಿಗಿನ ಸಂಪರ್ಕ ಹೊಂದಿವೆ ಎಂಬ ಅನುಮಾನ ವ್ಯಕ್ತವಾಗಿದೆ.
ಕಿಶೋರ್ ಸಾಲ್ವೆ ಅಲಿಯಾಸ್ ‘ಸೇಠ್’ ಈ ಹಣಕಾಸು ವ್ಯವಹಾರದಲ್ಲಿ ಕೇವಲ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದನಾ ಎಂಬ ಪ್ರಶ್ನೆ ಎದ್ದಿದೆ.
ಗೋವಾದಿಂದ ನೋಟು ಎಕ್ಸ್ಚೇಂಜ್‌ಗಾಗಿ ಹಣವನ್ನು ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಹಣ ಸಾಗಾಟದ ಜವಾಬ್ದಾರಿಯನ್ನು ಆರೋಪಿ ವಿರಾಟ್‌ಗೆ ನೀಡಲಾಗಿತ್ತು.
ವಿರಾಟ್‌ನ ಸಹಚರರು ಹಣ ಸಾಗಿಸುವ ವೇಳೆ ಕಂಟೇನರ್ ಮಿಸ್ಸಿಂಗ್ ಆಗಿದ್ದು, ಹಣದ ಸಮೇತ ಆರೋಪಿಗಳು ನಾಪತ್ತೆಯಾಗಿದ್ದಾರೆ.
ಕಿಶೋರ್ ಹಾಗೂ ಜಯೇಶ್ ನಡುವಿನ ದೂರವಾಣಿ ಸಂಭಾಷಣೆಯಲ್ಲಿ ಈ ಸಂಪೂರ್ಣ ವಿಚಾರ ಬಹಿರಂಗವಾಗಿದೆ.
ಗುಜರಾತ್‌ನ ರಾಜಕಾರಣಿಗೆ ಸೇರಿದ ಹಣ ಎಂಬ ಅಂಶವೂ ಸಂಭಾಷಣೆಯಲ್ಲಿ ಉಲ್ಲೇಖವಾಗಿದೆ ಎನ್ನಲಾಗಿದೆ.
ಆಡಿಯೋ ಕ್ಲಿಪ್‌ಗಳು ಹಾಗೂ ವಾಟ್ಸಪ್ ಕಾಲ್ ದಾಖಲೆಗಳ ಆಧಾರದ ಮೇಲೆ ತನಿಖೆ ಮುಂದುವರಿದಿದೆ.
ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಎಸ್‌ಐಟಿ ಅಧಿಕಾರಿಗಳು ಕೈಗೊಂಡಿದ್ದಾರೆ.
ಸದ್ಯ ಆರೋಪಿ ವಿರಾಟ್ ಅನ್ನು ಬಂಧಿಸಿರುವ ಮಹಾರಾಷ್ಟ್ರ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Total Views 17
RELATED ARTICLES

Most Popular

Recent Comments

KNN City News
Home
E-Paper