Monday, November 23, 2026
HomeBelagaviಜೈಪುರ ಮೇಯರ್ ಪ್ರವಾಸ ಕಾಟಾಚಾರದ್ದು: ಟೋಪಣ್ಣವರ

ಜೈಪುರ ಮೇಯರ್ ಪ್ರವಾಸ ಕಾಟಾಚಾರದ್ದು: ಟೋಪಣ್ಣವರ

ಬೆಳಗಾವಿ
ಬೆಳಗಾವಿ ಮಹಾನಗರ ಪಾಲಿಕೆಯ ಬಿಜೆಪಿ ನೇತೃತ್ವದ ಆಡಳಿತ ಹಾಗೂ ಕೆಲವು ವಿರೋಧ ಪಕ್ಷದ ಸದಸ್ಯರು “ಸಿಟಿಸ್ 2.0” ಘನ ತ್ಯಾಜ್ಯ ನಿರ್ವಹಣಾ ಯೋಜನೆ ಅಧ್ಯಯನ ಮಾಡುವ ನೆಪದಲ್ಲಿ ಜೈಪುರ ಕ್ಕೆ ನಡೆಸಿದ ಕಾಟಾಚಾರದ ಅಧ್ಯಯನ ಪ್ರವಾಸದಲ್ಲಿ ಮೇಯರ್ ಹೇಳಿಕೆ ಗೊಂದಲಕ್ಕೆ ಕಾರಣವಾಗಿದೆ ಎಂದು ರಾಜಕುಮಾರ ಟೋಪಣ್ಣವರ ಹೇಳಿದ್ದಾರೆ.
ಜೈಪುರದ ಪ್ರವಾಸದ ವೇಳೆ ಮೇಯರ್ ಮಂಗೇಶ್ ಪವಾರ ಬಿಡುಗಡೆ ಮಾಡಿದ ವಿಡಿಯೋ ಹೇಳಿಕೆಯಲ್ಲಿ “ಬೆಳಗಾವಿಯ ಘನ ತ್ಯಾಜ್ಯ ನಿರ್ವಹಣೆ ಜೈಪುರಕ್ಕಿಂತ ಉತ್ತಮ ಎಂದು ಮೇಯರ್ ಹೇಳಿದ್ದಾರೆ. ಬೆಳಗಾವಿಯ ವ್ಯವಸ್ಥೆ ಉತ್ತಮವಾಗಿದ್ದರೆ, ತೆರಿಗೆದಾರರ ಹಣವನ್ನು ವ್ಯರ್ಥವಾಗಿ ಖರ್ಚು ಮಾಡಿ ಜೈಪುರಕ್ಕೆ ಹೋಗುವ ಅಗತ್ಯ ಇತ್ತಾ ಎಂದು ಪ್ರಶ್ನಿಸಿದ್ದಾರೆ.
ಮೇಯರ್ ಅವರು 135 ಕೋಟಿ ರೂ. ಸಿಟಿಸ್ 2.0 ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ ವಾಸ್ತವಿಕತೆ ಬೇರೆ. ಒಂದು ವರ್ಷದ ಹಿಂದೆ ಮಹಾನಗರ ಪಾಲಿಕೆ ಸಭೆಯಲ್ಲಿ 135 ಕೋಟಿಗಳಲ್ಲಿ 20% ಪಾಲನ್ನು ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ ಖಾತೆಗೆ ಠೇವಣಿ ಮಾಡುವ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಇಂದಿನವರೆಗೆ ಹಣದ ಕೊರತೆ ನೆಪದಲ್ಲಿ ಪಾಲಿಕೆ ತನ್ನ ಪಾಲನ್ನು ಠೇವಣಿ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಈ ನಿರ್ಲಕ್ಷ್ಯ ಮತ್ತು ಆರ್ಥಿಕ ಅಸಮರ್ಥತೆಯಿಂದಾಗಿ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಬೆಳಗಾವಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರು ಮತ್ತು ಪಾಲಿಕೆ ಆಯುಕ್ತರೊಂದಿಗೆ ಸಮಾಲೋಚನೆ ನಡೆಸಿ ಯೋಜನೆಯನ್ನು 75 ಕೋಟಿ ರೂ.ಗಳಿಗೆ ಇಳಿಸುವಂತೆ ಸೂಚಿಸಿದ್ದಾರೆ. ಇದು ಆಡಳಿತದ ಸಂಪೂರ್ಣ ವೈಫಲ್ಯ ಎಂದು ಹರಿಹಾಯ್ದರು.
ಕಳೆದ 13 ತಿಂಗಳಲ್ಲಿ ಚಂಡೀಗಢ, ಇಂದೋರ್ ಮತ್ತು ಜೈಪುರ
ಕ್ಕೆ ಮೂರು ಅಧ್ಯಯನ ಪ್ರವಾಸಗಳನ್ನು ಕೈಗೊಂಡಿದ್ದಾರೆ. ಆದರೆ ಅದರ ಪ್ರಯೋಜನ ಬೆಳಗಾವಿ ಜನತೆಗೆ ಕಾಣಿಸುತ್ತಿಲ್ಲ. ಪಾಲಿಕೆಯ ಮೂಲಗಳ ಪ್ರಕಾರ ಜಯಪುರ ಪ್ರವಾಸಕ್ಕೆ ಮಾತ್ರವೇ 50 ಲಕ್ಷ ವೆಚ್ಚವಾಗಿದೆ.
ಪೌರಕಾರ್ಮಿಕರ ವೇತನ ನೀಡಲು ಹಣವಿಲ್ಲ ಎನ್ನುವ ಪಾಲಿಕೆ, ಸಾರ್ವಜನಿಕ ಹಣವನ್ನು ವ್ಯರ್ಥ ಪ್ರವಾಸಗಳಿಗೆ ಖರ್ಚು ಮಾಡುವುದು ನಾಚಿಕೆಯ ವಿಷಯ ಎಂದಿದ್ದಾರೆ.
ಜೈಪುರ ಕ್ಕಿಂತ ಬೆಳಗಾವಿ ಉತ್ತಮವೆಂದರೆ 50 ಲಕ್ಷ ಖರ್ಚು ಮಾಡಿದ್ದೇಕೆ, ಒಂದು ವರ್ಷದ ಹಿಂದೆ ಕೈಗೊಂಡ ನಿರ್ಣಯದಂತೆ ಹಣ ಠೇವಣಿ ಮಾಡದಿರುವುದೇಕೆ, ಈ ಮೂರು ಪ್ರವಾಸಗಳಿಂದ ಬೆಳಗಾವಿಗೆ ಏನು ಪ್ರಯೋಜನವಾಗಿರುವುದಾದರೂ ಏನು ಎಂದಿರುವ ಟೋಪಣ್ಣವರ ಪೌರಕಾರ್ಮಿಕರ ವೇತನ ವಿಳಂಬವಾಗುತ್ತಿರುವುದೇಕೆ ಬೆಳಗಾವಿ ಜನತೆ ಮೌನವಾಗಿರುವುದಿಲ್ಲ. ಪ್ರತಿಯೊಂದು ರೂಪಾಯಿ ಲೆಕ್ಕ ಕೇಳಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Views 47
RELATED ARTICLES

Most Popular

Recent Comments

KNN City News
Home
E-Paper