
ಬೆಳಗಾವಿ
ಬೆಳಗಾವಿ ತಾಲೂಕಿನ ಪಶ್ಚಿಮ ಮತ್ತು ಖಾನಾಪುರ ಭಾಗದಲ್ಲಿ ಅಕ್ರಮ ಗಣಿಗಾರಿಕೆ ಬೃಹತ್ ಪ್ರಮಾಣದಲ್ಲಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರ ಮೇಲೆ ಕೇಸ್ ದಾಖಲಾಗಿದೆ. ಅಲ್ಲದೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ರಾಜಕುಮಾರ ಟೋಪಣ್ಣವರ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೆಲ ದಿನಗಳ ಹಿಂದೆ ಅಕ್ರಮ ಗಣಿಗಾರಿಕೆಯ ಮೇಲೆ ಪ್ರಕರಣ ದಾಖಲಾಗಿರುವುದು ಸಣ್ಣವರ ಮೇಲೆ ಇವರು ಸರಕಾರಿ ಜಮೀನಿನಲ್ಲಿ ಗಣಿಗಾರಿಕೆ ಮಾಡುತ್ತಿದ್ದರು. ಇದು ಅಂತರರಾಜ್ಯ ಗಣಿಗಾರಿಕೆಗೆ ಸಂಬಂಧಿಸಿದ್ದು, ಇದರ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದರು.
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ್ ಅವರು ಪತ್ರ ಬರೆದಿದ್ದಾರೆ. ಅಕ್ರಮ ಗಣಿಗಾರಿಕೆಗೆಯ ಬಗ್ಗೆ ಸಂಬಂಧಿಸಿದರ ಮೇಲೆ ಕ್ರಮ ಕೈಗೊಳ್ಳಬೇಕಂದು ಬರೆದಿದ್ದಾರೆ. ಅದಕ್ಕೆ ನಾನು ಸ್ವಾಗತಿಸುತ್ತೇನೆ ಎಂದರು.
ಮಾಲಿನಿ ರೆಸಿಸೋಸಿ 12ನೇ ಸರ್ವೆದಲ್ಲಿ ಮೈನಿಂಗ್ ಮಾಡ್ತಿದ್ದಾರೆ. ಅದರ ಬಗ್ಗ ಸಂಪೂರ್ಣ ತನಿಖೆಯಾಗಬೇಕು
ಸರ್ವೆ ನಂಬರ್ 285ನಲ್ಲಿ ಮೈನಿಂಗ್ ಮಾಡಲು ಅನುಮತಿ ಇಲ್ಲ. ಇವರು ಹ್ಯಾಗೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಮಾಲಿನಿ ರಿಸೋರ್ಸಸ್ ಎಂಬ ಕಂಪನಿಯಿಂದ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಬಗ್ಗೆ ಯಾಕೆ ಮೌನ ಏಕೆ ಎಂದಿರುವ ಅವರು, ಮಾಲಿನಿ ರಿಸೋರ್ಸಸ್ನ ನಿಜವಾದ ಮಾಲೀಕರು ಯಾರು, ಮಾಹಿತಿಯ ಪ್ರಕಾರ, ಸಂತೋಷಕುಮಾರ್ ಪಾಟೀಲ ಮತ್ತು ತವನ ಪಾಟೀಲ, ಅವರು ಶಾಸಕರ ಕುಟುಂಬ ಸಂಬಂಧ ಹೊಂದಿರುವವರು. ಈ ಕಂಪನಿಗೆ ಸಂಬಂಧಪಟ್ಟವರಾಗಿದ್ದಾರೆ ಎಂಬ ಪ್ರಶ್ನೆಗಳು ಎದುರಾಗುತ್ತಿವೆ.ಇದರಿಂದ ಗಂಭೀರ ಅನುಮಾನಗಳು ಮೂಡುತ್ತವೆ ಎಂದಿದ್ದಾರೆ.
ಈ ದೂರು ನಿಜವಾದ ಉದ್ದೇಶದಿಂದ ನೀಡಲಾಗಿದೆಯೇ, ಅಥವಾ ಸಣ್ಣ ಮಟ್ಟದ ಗಣಿಗಾರಿಕೆ ನಡೆಸುವವರ ಮೇಲೆ ಒತ್ತಡ ಹೇರಲು ಮತ್ತು ಅಕ್ರಮವಾಗಿ ತೆಗೆಯಲ್ಪಟ್ಟ ಖನಿಜವನ್ನು ಒಂದು ನಿರ್ದಿಷ್ಟ ಕಂಪನಿಯ ಮೂಲಕ ಹರಿಸಲು ಪ್ರಯತ್ನವೇ,
ನಾವು ಯಾವುದೇ ಅಂತಿಮ ತೀರ್ಮಾನ ಹೇಳುತ್ತಿಲ್ಲ. ಆದರೆ ಈ ಎಲ್ಲಾ ವಿಷಯಗಳ ಬಗ್ಗೆ ಸ್ವತಂತ್ರ ತನಿಖೆ ಅಗತ್ಯ.ಸತ್ಯ ಹೊರಬರಬೇಕು. ಪಾರದರ್ಶಕತೆ ಇರಬೇಕು. ಕಾನೂನು ಎಲ್ಲರಿಗೂ ಸಮಾನವಾಗಿರಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ ಸುಜೀತ್ ಮುಳಗುಂದ ಮಾತನಾಡಿ, ಬೆಳಗಾವಿ ತಾಲೂಕಿನ ಬೆಳಗುಂದಿ ಹಾಗೂ ಖಾನಾಪುರದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಕುರಿತು ಸರಕಾರ ಸಿಪಿಐ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
