
ಬೆಳಗಾವಿ
ಬಿಸಿಲಿನ ತಾಪಮಾನಕ್ಕೆ ಕುಸಿದು ಬಿದ್ದು ವ್ಯಾಪಾರಿಯೋರ್ವ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ನಡೆದಿದೆ.
ಉಗಾರ ಬುದ್ರುಕ ಗ್ರಾಮದ ನಿವಾಸಿ ವರ್ಧಮಾನ ಮಗದುಮ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಉಗಾರ ಖುರ್ದ ಪಟ್ಟಣದ ವಾರದ ಸಂತೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ವೇಳೆ ಅವರು ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಸಿದರೂ, ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ. ತೀವ್ರ ಉಷ್ಣಾಂಶ ಹಾಗೂ ಬಿಸಿಲಿನ ಪರಿಣಾಮ ಸನ್ ಸ್ಟ್ರೋಕ್ ಸಂಭವಿಸಿ ಸಾವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
