Thursday, November 19, 2026
HomeBelagaviಗೋಕಾಕ್ ಪಿಎಸ್ಐ ಬ್ರಿಟಿಷ್ ಕಾಲದ ಧಮ್ಕಿ ಪೊಲೀಸಿಂಗ್ ಮಾಡಿದ್ದು ತಪ್ಪು: ಎಸ್ಪಿ ಬೇಸರ

ಗೋಕಾಕ್ ಪಿಎಸ್ಐ ಬ್ರಿಟಿಷ್ ಕಾಲದ ಧಮ್ಕಿ ಪೊಲೀಸಿಂಗ್ ಮಾಡಿದ್ದು ತಪ್ಪು: ಎಸ್ಪಿ ಬೇಸರ

ಬೆಳಗಾವಿ
ಬ್ರಿಟಿಷ್‌ ಕಾಲದಿಂದ ಬಂದ ಧಮ್ಕಿ ಹಾಕುವ ಪೊಲೀಸಿಂಗ್ ನಡೆಯುತ್ತಿರುವುದು ಖೇದಕರ ಸಂಗತಿ. ಗೋಕಾಕ್ ಪಿಎಸ್ಐ ಮಾಡಿದ್ದು ದೊಡ್ಡ ತಪ್ಪು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹೇಳಿದರು.
ಶನಿವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಗೋಕಾಕ್ ಪಿಎಸ್ಐ ಮಾಡಿರುವ ಧಮ್ಕಿ ಬಗ್ಗೆ ವರದಿ ಬಂದಿದೆ. ಅಮಿತ್ ಶಿಗಡೋಳಿ ಪಿಎಸ್ಐ ಗೆ ಹಿಂಬಾಲಿಸಿ ವಿಡಿಯೋ ಮಾಡಿರುವುದಾಗಿ ತಿಳಿದು ಬಂದಿದೆ. ಇವರು ಸುಳ್ಳು ಕೇಸ್ ದಾಖಲಿಸಿ ಕೊಲೆಗೆ ಯತ್ನಿಸಿದ್ದರು ಎಂದು ನೀಡಿದ್ದರು. ಆದರೆ ಆ ಪ್ರಕರಣದಲ್ಲಿ ಯಾರಿಗೂ ಗಾಯವಾಗಿರಲಿಲ್ಲ. ಎಲ್ಲರಲ್ಲಿ ಪ್ರಕರಣ ದಾಖಲಿಸಬೇಕೆಂದು ದೂರು ನೀಡಿದ್ದ. ಆದರೆ ಪಿಎಸ್ಐ ಮಾಡಿದ್ದು ತಪ್ಪು. ಅವರ ಮೇಲೆ ಕಾನೂನು ವಿಚಾರ ಮಾಡಲಾಗುವುದು. ನಮ್ಮ ಜಿಲ್ಲೆಯಲ್ಲಿ ಸಾರ್ವಜನಿಕರೊಂದಿಗೆ ಅವಾಚ್ಯ ಶಬ್ಧಗಳೊಂದಿಗೆ ಮಾತನಾಡಬಾರದು. ಯಾರಿಗೂ ಅಧಿಕಾರ ಇಲ್ಲ. ಈಗಾಗಲೇ ಹಾರೂಗೇರಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಅಲ್ಲಿನ ಒಬ್ಬರನ್ನು ಅಮಾನತ್ತು ಮಾಡಲಾಗಿದೆ. ಗೋಕಾಕ್ ಪಿಎಸ್ಐ ಇದೇ ರೀತಿ ನಡೆದುಕೊಂಡಿದ್ದಾರೆ. ಸಾರ್ವಜನಿಕರಿಗೆ ಅವಮಾನ ಮಾಡಲು ಅವಕಾಶ ಇಲ್ಲ ಎಂದರು.
ಪೊಲೀಸ್ ಇಲಾಖೆಯಲ್ಲಿ ಸುಮಾರು ವರ್ಷಗಳಿಂದ ಪೊಲೀಸರು ಸಾರ್ವಜನಿಕರೊಂದಿಗೆ ಗೌರವದಿಂದ ಮಾತನಾಡಬೇಕೆಂದು ಹಿರಿಯ ಪೊಲೀಸ್ ಅಧಿಕಾರಿಗಳಿಂದ ನಡೆದು ಬಂದಿದೆ. ಆದರೆ ಗೋಕಾಕ್ ಪಿಎಸ್ಐ ಸಾರ್ವಜನಿಕರೊಂದಿಗೆ ನಡೆದುಕೊಂಡಿದ್ದು ತಪ್ಪು. ನಾನು ಪಿಎಸ್ಐ ಮಾತನಾಡಿದ್ದರ ವಿರುದ್ಧ ಇದ್ದೇನೆ. ಪೊಲೀಸ್ ಅಧಿಕಾರಿಯಾಗಿ ಸಾರ್ವಜನಿಕರೊಂದಿಗೆ ಯಾವ ರೀತಿ ಇರಬೇಕು.ಕಾನೂನು ಉಪಯೋಗಿಸುವ ಬದಲು ಧಮ್ಕಿ ಹಾಕಿ ಪೊಲೀಸಿಂಗ್ ಮಾಡುವುದು ಸರಿಯಲ್ಲ ಎಂದರು.
ನಾನು ಬೆಳಗಾವಿಯಲ್ಲಿ ಬಂದು ಅಧಿಕಾರ ಸ್ವೀಕಾರ ಮಾಡಿದಾಗಲೇ ಎಲ್ಲ ಪೊಲೋಸ್ ಅಧಿಕಾರಿಗಳ ಸಭೆ ಕರೆದು ನಾನು ಯಾರನ್ನೂ ಬೈಯುವುದಲ್ಲ. ನನ್ನ ಸಿಬ್ಬಂದಿಗಳು ಏನೇ ತಪ್ಪು ಮಾಡಿದರೂ ಸರಿ. ಅವರು ಅಮಾನತ್ತು ಮಾಡುವವರೆಗೂ ತಪ್ಪು ಮಾಡಿದ್ದರೂ ಸರಿ. ನನ್ನ ಕಚೇರಿಯಲ್ಲಿ ಬಂದು ಕೂರಿಸಿ ಮಾತನಾಡಿಸಿ ಬೆಲೆ ಕೊಡುತ್ತೇನೆ. ಇದನ್ನು ನೀವು ಅನುಸರಿಸದಿದ್ದರೇ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದೆ ಎಂದರು.
ನಮ್ಮ ಪೊಲೀಸ್ ಅಧಿಕಾರಿಗಳು ನಮ್ಮ ಸಿಬ್ಬಂದಿಗೆ ಬೈಯುವುದು, ಕೂಗಾಡುವುದಕ್ಕೂ ನಾನು ವಿರೋಧ ಇದ್ದೇ‌ನೆ. ಅದೇ ರೀತಿ ಸಾರ್ವಜನಿಕರೊಂದಿಗೆ ಅವಾಚ್ಯ ಶಬ್ಧದಿಂದ ಮಾತನಾಡಿದರೆ ಯಾರೇ ಇರಲಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.

Total Views 297
RELATED ARTICLES

Most Popular

Recent Comments

KNN City News
Home
E-Paper