Monday, November 23, 2026
HomeBelagaviಮಂಜುನಾಥ್ ಗೆ ಬಿಗ್ ಶಾಕ್ ಕೊಟ್ಟ ಇಡಿ

ಮಂಜುನಾಥ್ ಗೆ ಬಿಗ್ ಶಾಕ್ ಕೊಟ್ಟ ಇಡಿ

ಬೆಳಗಾವಿ
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಅಳಿಯ ಹಾಗೂ ಬೆಳಗಾವಿ ವಲಯ ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ ಅವರ ನಿವಾಸದ ಇಡಿ ನಡೆಸಿದ ದಾಳಿ ಪ್ರಕರಣದಲ್ಲಿ ಮಹತ್ವದ ಮಾಹಿತಿಗಳು ಹೊರಬಿದ್ದಿವೆ.
ದಾಳಿ ಅಂತ್ಯಗೊಂಡ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಇಡಿ ಅಧಿಕಾರಿಗಳು, ಶೋಧ ಕಾರ್ಯದ ವೇಳೆ ಒಟ್ಟು 13.3 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ದಾಳಿಯ ವೇಳೆ 5.5 ಕೋಟಿ ನಗದು, 7.8 ಕೋಟಿ ಮೌಲ್ಯದ ಚಿನ್ನಾಭರಣ, ಹಾಗೂ 3.3 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ಪತ್ತೆಯಾಗಿದೆ.ಇದಲ್ಲದೆ, ಕ್ಯಾಶ್ ಬುಕ್, ಆಸ್ತಿ ದಾಖಲೆಗಳು ಸೇರಿದಂತೆ ಹಲವು ಮಹತ್ವದ ಹಣಕಾಸು ದಾಖಲೆಗಳು ಇಡಿ ವಶಕ್ಕೆ ಸಿಕ್ಕಿವೆ. ವಶಪಡಿಸಿಕೊಂಡ ದಾಖಲೆಗಳ ಆಧಾರದ ಮೇಲೆ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಗುವ ಸಾಧ್ಯತೆ ಇದೆ.

Total Views 294
RELATED ARTICLES

Most Popular

Recent Comments

KNN City News
Home
E-Paper