
ಬೆಳಗಾವಿ
ಇಲ್ಲಿನ ಉತ್ಸವ ಕ್ರಾಸ್ ಬಳಿಯ ಪೌಂಡ್ರಿ ಕ್ಲಸ್ಟರ್ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉಚಗಾಂವದ ಸಾಗರ ಸಮೋರೆ (29) ಬಂಧಿತ. ಆರೋಪಿತನಿಂದ 60 ಸಾವಿರ ಮೌಲ್ಯದ 1 ಕೆ.ಜಿ. 212 ಗ್ರಾಂ ಗಾಂಜಾ, ಮೊಬೈಲ್, 310 ನಗದು ಹಾಗೂ ಬೈಕ್ ಸೇರಿ ಒಟ್ಟು 1,03,310 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉದ್ಯಮಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
