Monday, November 23, 2026
HomeBelagaviಪಾಲಿಕೆ ಸದಸ್ಯ ಪಠಾಣ್ ವಿರುದ್ಧ ಲಕ್ಷ್ಮೀ ಕಿಡಿ

ಪಾಲಿಕೆ ಸದಸ್ಯ ಪಠಾಣ್ ವಿರುದ್ಧ ಲಕ್ಷ್ಮೀ ಕಿಡಿ

ಬೆಳಗಾವಿ
ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆ ಸಭೆ ಮುಗಿದ ಬಳಿಕ ಅಧಿಕಾರಿ ಹಾಗೂ ಪಾಲಿಕೆ ಸದಸ್ಯರ ನಡುವಿನ ವಾಗ್ವಾದಕ್ಕೆ ಕಾರಣವಾಯಿತು.
ಪಾಲಿಕೆ ಅಭಿವೃದ್ಧಿ ಶಾಖೆಯ ಉಪ ಆಯುಕ್ತೆ ಲಕ್ಷ್ಮೀ ನಿಪ್ಪಾಣಿಕರ್ ಹಾಗೂ ಎಂಐಎಂ ಪಾಲಿಕೆ ಸದಸ್ಯ ಶಾಹಿದ್ ಖಾನ್ ಪಠಾಣ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಕೆಲಕಾಲ ಪಾಲಿಕೆ ಕಚೇರಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಸಾಮಾನ್ಯ ಸಭೆಯಲ್ಲಿ ತಮ್ಮನ್ನು ಗುರಿಯಾಗಿಸಿಕೊಂಡು ಸದಸ್ಯ ಶಾಹಿದ್ ಖಾನ್ ಟೀಕೆ ಮಾಡಿದ್ದಾರೆ ಎಂದು ಆರೋಪಿಸಿದ ಉಪ ಆಯುಕ್ತೆ ಲಕ್ಷ್ಮೀ ನಿಪ್ಪಾಣಿಕರ್, ಸಭೆ ಮುಗಿದ ಬಳಿಕ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು. ಅಭಿವೃದ್ಧಿ ಕೆಲಸಗಳ ವಿಚಾರವಾಗಿ ಚರ್ಚೆ ನಡೆಯುವ ವೇಳೆ, “ಕೆಲಸ ಮಾಡಲು ನೀವು ಯೋಗ್ಯರಲ್ಲ” ಎಂಬ ರೀತಿಯಲ್ಲಿ ಸದಸ್ಯರು ಟೀಕಿಸಿದ್ದಾರೆ ಎಂದು ಅಧಿಕಾರಿಯವರು ಆಕ್ಷೇಪ ವ್ಯಕ್ತಪಡಿಸಿದರು.
ಸಭೆ ಮುಗಿದ ನಂತರ ಕಚೇರಿಯಲ್ಲೇ ಇಬ್ಬರ ನಡುವೆ ಮಾತಿನ ಚಕಮಕಿ ತೀವ್ರಗೊಂಡಿತು. ಈ ವೇಳೆ ಲಕ್ಷ್ಮೀ ನಿಪ್ಪಾಣಿಕರ್ ಅವರು ಶಾಹಿದ್ ಖಾನ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ, “ನಾನು ಕೆಲಸ ಬಿಡಲು ಸಿದ್ಧ, ಆದರೆ ಆತನನ್ನು ಬಿಡುವುದಿಲ್ಲ. ನನ್ನ ವಿರುದ್ಧ ಮಾತನಾಡಲು ಅವನ್ಯಾರು?” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೌನ್ಸಿಲ್ ಸಭೆಯಲ್ಲಿ ಮಹಿಳಾ ಅಧಿಕಾರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿದ ಅವರು, “ನೀವು ಕೌನ್ಸಿಲ್‌ನಲ್ಲಿ ಒಬ್ಬ ಮಹಿಳಾ ಅಧಿಕಾರಿಗೆ ಅಪಮಾನ ಮಾಡುತ್ತಿದ್ದೀರಿ” ಎಂದು ಅಸಮಾಧಾನ ಹೊರಹಾಕಿದರು.
ಇಬ್ಬರ ನಡುವಿನ ವಾಗ್ವಾದವನ್ನು ತಿಳಿಗೊಳಿಸಲು ಕೆಲ ಬಿಜೆಪಿ ಪಾಲಿಕೆ ಸದಸ್ಯರು ಮಧ್ಯಪ್ರವೇಶಿಸಿದರೂ, ಅವರ ಮೇಲೂ ಉಪ ಆಯುಕ್ತೆ ಅಸಮಾಧಾನ ವ್ಯಕ್ತಪಡಿಸಿದರು.

ದುಡ್ಡು ಕೊಟ್ಟರೆ ಎಲ್ಲರೂ ಚಲೋ, ನಾನು ಅವನಿಗೆ ಒಂದು ಪೈಸೆ ದುಡ್ಡು ಕೊಡಲ್ಲ” ಎಂದು ಹೇಳಿರುವುದಾಗಿ ತಿಳಿದುಬಂದಿದ್ದು, ಕಚೇರಿಯಲ್ಲಿ ಕೆಲಕಾಲ ಏರುಧ್ವನಿಯಲ್ಲಿ ಮಾತಿನ ಚಕಮಕಿ ನಡೆದಿದೆ.ಘಟನೆಯಿಂದ ಪಾಲಿಕೆ ಕಚೇರಿ ವಲಯದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

Total Views 130
RELATED ARTICLES

Most Popular

Recent Comments

KNN City News
Home
E-Paper