Thursday, November 19, 2026
HomeBelagaviನಗರದಲ್ಲಿ ಹೆಚ್ಚಾದ ಮಾಂಜಾ ದಾರದ ಆತಂಕ: ಪೊಲೀಸ್ ಸಿಬ್ಬಂದಿಗೆ ಗಂಭೀರ ಗಾಯ

ನಗರದಲ್ಲಿ ಹೆಚ್ಚಾದ ಮಾಂಜಾ ದಾರದ ಆತಂಕ: ಪೊಲೀಸ್ ಸಿಬ್ಬಂದಿಗೆ ಗಂಭೀರ ಗಾಯ

ಬೆಳಗಾವಿ
ನಗರದ ಕಪಿಲೇಶ್ವರ ಫ್ಲೈಓವರ್ ಮೇಲೆ ಹಾರಿಬಂದಿದ್ದ ಮಾಂಜಾ ದಾರ ಸಿಲುಕಿದ ಪರಿಣಾಮ ರೈಲ್ವೆ ಪೊಲೀಸ್ ಸಿಬ್ಬಂದಿ ಬಿ.ಆರ್. ನಾಯಕ್ ಅವರ ಮೂಗಿಗೆ ಗಾಯವಾಗಿ ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
ಕಪಿಲೇಶ್ವರ ಫ್ಲೈಓವರ್ ಮೇಲೆ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಮಾಂಜಾ ದಾರ ಸಿಲುಕಿದ್ದರಿಂದ ಬಿ.ಆರ್. ನಾಯಕ್ ಅವರ ಮೂಗಿನ ಭಾಗಕ್ಕೆ ಗಾಯವಾದ ಪರಿಣಾಮ ಅವರಿಗೆ ಸುಮಾರು ಆರು ಹೊಲಿಗೆ ಹಾಕಲಾಗಿದೆ.
ಮಾಂಜಾ ದಾರಗಳು ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಹಾಗೂ ವಾಹನ ಸವಾರರ ಕುತ್ತಿಗೆ, ಮುಖ ಮತ್ತು ಮೂಗಿನ ಭಾಗಕ್ಕೆ ಸಿಲುಕಿದರೆ ಗಂಭೀರ ಗಾಯಗಳಾದ ಘಟನೆ ಈ ಭಾಗದಲ್ಲಿ ಹೆಚ್ಚಾಗಿದೆ. ಕೆಲ ವರ್ಷಗಳ ಹಿಂದೆ ಬೆಳಗಾವಿ ಛಾಯಾಗ್ರಾಹಕ ವಿಶ್ವನಾಥ ದೇಸಾಯಿಗೂ ಮಾಂಜಾ ದಾರದ ದಾಳಿಗೆ ಸಿಲುಕಿ ಚಿಕಿತ್ಸೆ ಪಡೆಸಿದ್ದರು.
ಈ ಹಿನ್ನೆಲೆಯಲ್ಲಿ ಅಪಾಯಕಾರಿ ಮಾಂಜಾ ದಾರದ ಮಾರಾಟ ಮತ್ತು ಬಳಕೆಯನ್ನು ತಡೆಯಲು ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಗರದ ಪ್ರಮುಖ ರಸ್ತೆ, ಫ್ಲೈಓವರ್‌ಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಇಂಥ ದಾರಗಳಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂಬ ಒತ್ತಾಯ ಸಾರ್ವಜನಿಕರು ಮಾಡಿದ್ದಾರೆ.
ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಮಾಂಜಾ ದಾರದ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ, ನಿಯಮ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎನ್ನುವುದು ಜನರ ಒತ್ತಾಯವಾಗಿದೆ.

 

Total Views 385
RELATED ARTICLES

Most Popular

Recent Comments

KNN City News
Home
E-Paper