
ಬೆಳಗಾವಿ
ಬೆಳಗಾವಿ ನಗರದಲ್ಲಿ ಪೊಲೀಸರು ಜಾಗೃತಿ ಮೂಡಿಸಿದರೂ ಕೊಲೆ, ಸರಗಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹಚ್ಚಾಗುತ್ತಿದ್ದು ವಿಶ್ವೇಶ್ವರಯ್ಯ ನಗರದಲ್ಲಿವ ಲೋಕೋಪಯೋಗಿ ಇಲಾಖೆಯ ವಸತಿ ನಿಲಯದಲ್ಲಿ ಒಂದೇ ತಿಂಗಳಲ್ಲಿ ಐದು ಮನೆಗಳ್ಳತನ ನಡೆದಿದ್ದು ಸ್ಥಳೀಯರು ಬೆಚ್ವಿ ಬಿದ್ದಿದ್ದಾರೆ.
ಕಳೆದ ಒಂದು ತಿಂಗಳಲ್ಲಿ 5 ಕಳ್ಳತನ ಪ್ರಕರಣ ಬೆಳಕಿಗೆ ಬಂದಿವೆ. ಬೆಳಗಾವಿ ಡಿಸಿ ಮನೆಯ ಕೂಗಳತೆಯಲ್ಲೇ ಈ ರೀತಿ ನಡೆದರೆ ಇನ್ನೂ ದೂರ ಎಲ್ಲೋ ಇರುವ ಮನೆಗಳನ್ನು ಆ ದೇವರೆ ಕಾಪಾಡಬೇಕಾದ ಸ್ಥಿತಿ ಎದುರಾಗಿದೆ.
ವಿಶ್ವೇಶ್ವರಯ್ಯ ನಗರದಲ್ಲಿರುವ ಪಿಡಬ್ಲೂಡಿ ವಸತಿ ಗೃಹಗಳಲ್ಲಿ ಕಳೃತನ ಮಾಡಿ ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಆಭರಣ ಸೇರಿದಂತೆ ಹಣವನ್ನು ದೋಚಿ ಕಳ್ಳರು ಪರಾರಿಯಾಗುತ್ತಿದ್ದಾರೆ. ಬೆಳಗಾವಿಯಲ್ಲಿ ರಾತ್ರಿ ಹೊತ್ತು ಅಪರಾಧ ಪ್ರಕರಣಗಳು ಹೆಚ್ಚುತ್ತಿದೆ. ಹಾಗಾಗಿ ಮಾಹಿತಿ ತಂತ್ರಜ್ಞಾನ ಬಳಕೆಗೆ ಒತ್ತು ನೀಡಿ, ಬೆಳಗಾವಿ ಪೊಲೀಸರು ನಗರದಲ್ಲಿರುವ ವಿವಿಧ ಬಡಾವಣೆಗಳಲ್ಲಿ ನಡೆಯುವ ಅಪರಾಧ ನಿಯಂತ್ರಣಕ್ಕೆ ಹೊಸ ಯೋಜನೆ ಹಾಕಿಕೊಳ್ಳಬೇಕಿದೆ. ಹಿಂದೆ ಇದ್ದ ರಾತ್ರಿ ವೇಳೆ ಪೊಲೀಸರ ಗಸ್ತು ಕಾರ್ಯ ಮತ್ತೆ ಪ್ರಾರಂಭಿಸಿ ಸಾರ್ವಜನಿಕರ ಹೀತದೃಷ್ಠಿಯಿಂದ ಬೆಳಗಾವಿ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂಬುವುದು ಹಿರಿಯ ನಾಗರಿಕರ ಒತ್ತಾಯವಾಗಿದೆ.
ಹಬ್ಬದ ವೇಳೆ ಮನೆಗೆ ಬೀಗ ಹಾಕಿಕೊಂಡು ಎರಡು–ಮೂರು ದಿನ ಬೇರೆ ಊರಿಗೆ ಹೋದವರ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳರು ತಮ್ಮ ಕೈಚಳಕ ತೋರುತ್ತಿದ್ದಾರೆ. ಕೈಗೆ ಸಿಕ್ಕಿದ್ದನ್ನು ದೋಚುತ್ತಿದ್ದಾರೆ. ಮನೆಯ ಮಾಲೀಕರು ಹಬ್ಬ ಮುಗಿಸಿಕೊಂಡು ಬಂದು ನೋಡಿದಾಗ ಕಳ್ಳತನ ಆಗಿರುವುದು ಕಂಡು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ. ಇನ್ನಾದರೂ ಎಪಿಎಂಸಿ ಠಾಣೆ ಪೊಲೀಸರು ಎಚ್ಚೆತ್ತುಕೊಂಡು ವಿಶ್ವೇಶ್ವರಯ್ಯಾ ನಗರದ ನಿವಾಸಿಗಳ ಹೀತ ಕಾಪಾಡಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.
