
ಬೆಳಗಾವಿ
ಬೆಳಗಾವಿ ನಗರದಲ್ಲಿ ಐದಾರು ತಿಂಗಳಲ್ಲಿ ಆಟೋ ಮೀಟರ್ ಕಡ್ಡಾಯಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಹೇಳಿದರು.
ಮಂಗಳವಾರ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸಾರ್ವಜನಿಕರ ಬಹುವರ್ಷಗಳ ಬೇಡಿಕೆ ಇತ್ತು. ನಗರದಲ್ಲಿ ಸಂಚರಿಸುವ ಆಟೋಗಳಿಗೆ ಮೀಟರ್ ಅಳವಡಿಸಬೇಕೆಂದು. ಆಟೋ ಚಾಲಕರಿಗೆ ತೊಂದರೆಯಾಗದಂತೆ ಮೀಟರ್ ಅಳವಡಿಸುವಂತೆ ಸೂಚನೆ ನೀಡಲಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಆಟೋ ಚಾಲಕರ ಸಮಸ್ಯೆಯ ಬಗ್ಗೆ ಸಭೆ ನಡೆಸಿದ್ದೇವೆ. ಕಳೆದ 10 ಸಾವಿರ ಆಟೋ ಮೀಟರ್ ಪರ್ಮಿಟ್ ಪಡೆದಿದ್ದೇವೆ. ಈ ಅನುಮತಿಯನ್ನು ಐದು ವರ್ಷಗಳ ಕಾಲ ತಡೆ ಹಿಡಿಯಬೇಕೆಂದು ಹೇಳಿದರು.
ಇನ್ನೊಂದು ಬಾರಿ ಆಟೋ ಚಾಲಕರ ಜೊತೆಗೆ ಸಭೆ ನಡೆಸಿ ಆಟೋ ಚಾಲಕರು ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಆಟೋ ಮೀಟರ್ ಅಳವಡಿಸಲಾಗುವುದು. ಆಟೋ ಚಾಲಕರ ಬೇಡಿಕೆಯ ಅನುಸಾರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಸಹಕಾರ ಕೊಡುತ್ತದೆ. ಮೀಟರ್ ಅಳವಡಿಕೆ ಮಾಡುವುದು ನಿಶ್ಚಿತ ಎಂದರು.
