Monday, November 23, 2026
HomeBelagaviಮುಧೋಳ ಹಾಸ್ಟೆಲ್ ನಲ್ಲಿ ಬಿದ್ದು ಅನುಮಾನಾಸ್ಪದವಾಗಿ ಮೃತಪಟ್ಟ ಮುಚ್ಚಂಡಿ ಯುವಕ

ಮುಧೋಳ ಹಾಸ್ಟೆಲ್ ನಲ್ಲಿ ಬಿದ್ದು ಅನುಮಾನಾಸ್ಪದವಾಗಿ ಮೃತಪಟ್ಟ ಮುಚ್ಚಂಡಿ ಯುವಕ

 

ಬೆಳಗಾವಿ
ಬಾಗಲಕೋಟ ಜಿಲ್ಲೆಯ ‌ಮುಧೋಳ ತಾಲೂಕಿನ ಸಾಯಿ ಹಾಸ್ಟೆಲ್ ನಿಂದ ಬಿದ್ದ ಎಸ್ಸೆಸ್ಸೆಲ್ಸಿ ಯುವಕ ಅನುಮಾನಾಸ್ಪದವಾಗಿ ಚಿಕಿತ್ಸೆ ಫಲಿಸದೆ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ‌ಘಟನೆ ಬುಧವಾರ ನಡೆದಿದೆ.
ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮದ ಯುವಕ ಅಭಿಷೇಕ ಸಂತೋಷ ವಾಲಿಶೆಟ್ಟಿ (16) ಅನುಮಾನಾಸ್ಪದವಾಗಿ ಮೃತಪಟ್ಟ ‌ಯುವಕ. ಬೆಳಗಾವಿಯಿಂದ ಮುಧೋಳ ಸಾಯಿನಿಕೇತ ಶಾಲೆಯಲ್ಲಿ ವಿದ್ಯಾಭ್ಯಾಸಕ್ಕೆ ಹೋಗಿದ್ದ. ಕಳೆದ ನ.15 ರಂದು ಹಾಸ್ಟೆಲ್ ‌ಮೇಲಿಂದ ಅಭಿಷೇಕ ಬಿದ್ದು ಗಂಭೀರವಾಗಿ ಗಾಯವಾಗಿದೆ ಎಂದು ಹಾಸ್ಟೆಲ್ ಸಿಬ್ಬಂದಿಗಳು ಹೇಳಿದ್ದರು. ಅಲ್ಲಿಂದ ನೇರವಾಗಿ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಹೋದರು‌. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಇದು ಆಕಸ್ಮಿಕ ಸಾವಲ್ಲ. ಇದೊಂದು ಅನುಮಾನಾಸ್ಪದವಾಗಿದೆ ಎಂದು ಅಭಿಷೇಕ ಕುಟುಂಬಸ್ಥರು ಆರೋಪಿಸಿದ್ದಾರೆ.
ಮೃತ ಅಭಿಷೇಕ ತಂದೆ ಸಂತೋಷ ವಾಲಿಶೆಟ್ಟಿ ಮಾತನಾಡಿ, ಕಳೆದ ನ.15 ರಂದು ನನ್ನ ಮಗಾ ಹಾಸ್ಟೆಲ್ ಮೇಲಿಂದ ಕಾಲು ಜಾರಿ ಬಿದ್ದು ಗಾಯವಾಗಿದೆ ಎಂದು ಶಾಲೆಯ ಆಡಳಿತ ಮಂಡಳಿಯವರು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೋದರು. ನನ್ನ ಮಗ ಹಾಸ್ಟೆಲ್ ಮೇಲಿಂದ ಬಿದ್ದರೆ ಎಲ್ಲಕಡೆ ಗಾಯವಾಗಬೇಕು. ಕೇವಲ ತಲೆಗೆ ಮಾತ್ರ ಪೆಟ್ಟಾಗಿದೆ. ನನ್ನ ಮಗನಿಗೆ ಶಾಲೆಯ ಆಡಳಿತ ಮಂಡಳಿಯವರೇ ಕೊಲೆ ಮಾಡಿರುವ ಶಂಕೆ ಇದೆ. ಇದರ ಸಮಗ್ರ ತನಿಖೆ ನಡೆಸಿ ನಮ್ಮ ಮಗನ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.
ಮೃತ ಅಭಿಷೇಕ ತಾಯಿ ಉಮಾ ಮಾತನಾಡಿ, ಕಳೆದ ಗುರುವಾರ ನನ್ನ ಮಗನೊಂದಿಗೆ ಮಾತನಾಡಿದ್ದೇನೆ. ಅವನು ನನ್ನ ಜೊತೆಗೆ ಚೆನ್ನಾಗಿ ‌ಮಾತನಾಡಿದ್ದ. ನನಗೆ ಸ್ಕೀನ್ ಇನ್ ಪೆಕ್ಷನ್ ಆಗಿದೆ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿದ್ದ. ಕಳೆದ ನ.15 ರಂದು ಹಾಸ್ಟೆಲ್ ವಾಡ್೯ನ ಕರೆ ಮಾಡಿದರೆ ಇಲ್ಲ ಮಗ ಹಾಸ್ಟೆಲ್ ಮೇಲಿಂದ ಬಿದ್ದು ಗಂಭೀರವಾಗಿ ಗಾಯವಾಗಿದ್ದಾನೆ ಎಂದು ಹೇಳಿದರು. ರಕ್ತದ ಮಡುವಿನಲ್ಲಿ ಬಿದ್ದ ನನ್ನ ಮಗನಿಗೆ ಸರಿಯಾಗಿ ಹಾಸ್ಟೆಲ್ ನವರು ನೋಡಿಕೊಳ್ಳಲಿಲ್ಲ ಎಂದು ಆರೋಪಿಸಿದರು‌.

 

Total Views 537
RELATED ARTICLES

Most Popular

Recent Comments

KNN City News
Home
E-Paper