Monday, November 23, 2026
HomeKoppalವಕ್ಫ್ ವಿವಾದ ಬಿಜೆಪಿಯಿಂದ ನ. 22ರಂದು ಜಿಲ್ಲಾಡಳಿತ ಭವನದ ಎದುರು ಹೋರಾಟ : ನವೀನ ಗುಳಗಣ್ಣನವರ

ವಕ್ಫ್ ವಿವಾದ ಬಿಜೆಪಿಯಿಂದ ನ. 22ರಂದು ಜಿಲ್ಲಾಡಳಿತ ಭವನದ ಎದುರು ಹೋರಾಟ : ನವೀನ ಗುಳಗಣ್ಣನವರ

ಕನ್ನಡಮ್ಮ ಸುದ್ದಿ-ಕೊಪ್ಪಳ: ವಕ್ಫ್ ವಿಚಾರದಲ್ಲಿ ರಾಜ್ಯದಲ್ಲಿ ಬಿಜೆಪಿ ಆರಂಭದಿಂದಲೂ ಹೋರಾಟ ಮಾಡಿಕೊಂಡೇ ಬಂದಿದೆ. ‘ಹೊಲಗಳು ಹಾಗೂ ಸಾರ್ವಜನಿಕರ ಆಸ್ತಿಗಳಲ್ಲಿ ವಕ್ಫ್ ಹೆಸರು ಸೇರ್ಪಡೆಯಾಗಿರುವುದರಿಂದ ಈ ವಿಷಯಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ನಮ್ಮ ಭೂಮಿ ನಮ್ಮಹಕ್ಕು ಎನ್ನುವ ಶೀರ್ಷಿಕೆಯಡಿ ನ. 22ರಂದು ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಒಂದು ದಿನ ಹೋರಾಟ ನಡೆಸಲಾಗುವುದು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನವೀನ ಗುಳಗಣ್ಣನವರ ಹೇಳಿದರು.

ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಬೇಡಿಕೆ ಈಡೇರುವ ತನಕ ರಾಜ್ಯ ಸರ್ಕಾರದ ವಿರುದ್ಧ ನಿರಂತರವಾಗಿ ಹೋರಾಟ ನಡೆಸಲಾಗುವುದು. ಪಕ್ಷದ ರಾಜ್ಯಾಧ್ಯಕ್ಷ  ಬಿ.ವೈ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ ಮತ್ತು ವಿಧಾನಪರಿಷತ್ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಮೂರು ತಂಡಗಳು ರಾಜ್ಯದಾದ್ಯಂತ ಪ್ರವಾಸ ಮಾಡಿ ಸಂಕಷ್ಟಕ್ಕೆ ಸಿಲುಕಿದ ರೈತರ ಮನವಿ ಆಲಿಸಲಿವೆ ಎಂದರು.

‘ಹೊಲಗಳು ಹಾಗೂ ಸಾರ್ವಜನಿಕರ ಆಸ್ತಿಗಳಲ್ಲಿ ವಕ್ಫ್ ಹೆಸರು ಸೇರ್ಪಡೆಯಾಗಿರುವುದರಿಂದ ಈ ವಿಷಯಕ್ಕೆ ತಾರ್ಕಿಕ ಅಂತ್ಯ ಕಾಣಿಸಲು  ಮತ್ತು ವಕ್ಫ್ ವಿಚಾರದಲ್ಲಿ ರಾಜ್ಯ ಸರ್ಕಾರದ ನಡುವಳಿಕೆಗಳ ವಿರುದ್ಧ ರಾಜ್ಯದಾದ್ಯಂತ ಹೋರಾಟ ನಡೆಯಲಿದೆ. ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಮುಂಬಾಗದಲ್ಲಿ ನ. 22 ರಂದು ಜಿಲ್ಲಾ ಬಿಜೆಪಿಯಿಂದ ನಡೆಯುವ ಹೋರಾಟಕ್ಕೆ ರೈತರು,  ಸಂಘಟಕರು ಭಾಗವಹಿಸುವುಂತೆ ಮನವಿ ಮಾಡಿದರು.

ಪಕ್ಷದಿಂದ ಸ್ಥಾಪಿಸಿರುವ ಸಹಾಯವಾಣಿಗೆ 40ಕ್ಕಿಂತಲೂ ಹೆಚ್ಚು ಕರೆಗಳು ಬಂದಿವೆ. ರಾಜ್ಯ ಸರ್ಕಾರದ ವಿರುದ್ಧ ಹೋರಾಡಿ ರೈತರಿಗೆ

ನ್ಯಾಯೊದಗಿಸಿಕೊಡುವ ಕೆಲಸವನ್ನು ಪಕ್ಷ ಮಾಡಲಿದೆ.  ನಮ್ಮ  ನಾಯಕರು ಒಟ್ಟಾಗಿ ಪಕ್ಷದ ವೇದಿಕೆಯಡಿ ವಕ್ಫ್ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಸಂಘಟಿತ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು.  ಈ ಸಂದರ್ಭದಲ್ಲಿ ಜಿಲ್ಲಾ ಮಾಧ್ಯಮ ವಕ್ತಾರ ಸೋಮಶೇಖರಗೌಡ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಪ್ರಸಾದ ಗಾಳಿ ಇದ್ದರು.

Total Views 59
RELATED ARTICLES

Most Popular

Recent Comments

KNN City News
Home
E-Paper