ಕನ್ನಡಮ್ಮ ಸುದ್ದಿ-ಕೊಪ್ಪಳ : ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತನ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರoಭ ಹಾಗೂ ಜಿಲ್ಲಾ ಮಟ್ಟದ ಚುಟುಕು ಕವಿಗೋಷ್ಠಿ ಡಿಸೆಂಬರ್ 1 ರಂದು ಹಮ್ಮಿಕೊಳ್ಳಲಾಗಿದ್ದುಯ, ಜಿಲ್ಲಾ ಕಾರ್ಯಕ್ರಮವನ್ನು ಡಾ ಎಂ ಜಿ ಆರ್ ಅರಸ್ ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ನೂತನ ಜಿಲ್ಲಾಧ್ಯಕ್ಷ ರುದ್ರಪ್ಪಭಂಡಾರಿ ತಿಳಿಸಿದ್ದಾರೆ.
ಆದಿ ಅನಾದಿ ಕಾಲದಿಂದ, ಸಾಹಿತ್ಯದಲ್ಲಿ ಚುಟುಕಿಗೆ ಪ್ರಾಧಾನ್ಯತೆ ಸಿಕ್ಕಿದೆ. ರಾಜ್ಯಮಟ್ಟದಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಗುರುತಿಸಿಕೊಂಡಂತೆ ಕೊಪ್ಪಳವು ಹಿಂದೆ ಬಿದ್ದಿಲ್ಲ. ದಿ. ಹನುಮಂತಪ್ಪ ಅಂಡಗಿ ಚಿಲವಾಡಗಿ ನಿರಂತರ, 12 ವರ್ಷ ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ತಿನ ಪೋಷಕರಾಗಿ ಮುನ್ನಡೆಸಿದ್ದರು. ಅವರ ಆಶಯ ಮುಂದುವರೆಸುವ ಸೌಭಾಗ್ಯ ನನಗೆ ಸಿಕ್ಕಿದೆ. ಚುಟುಕು ಸಾಹಿತ್ಯ ಪರಿಷತ್ತಿಗೆ ಜೀವ ತುಂಬುವ ಹಾದಿಯಲ್ಲಿ, ಜಿಲ್ಲಾ ಮಟ್ಟದ ಚುಟುಕು ಕವಿಗೋಷ್ಠಿಗೆ, ಕವಿಗಳಿಗೆ ಆಹ್ವಾನ ನೀಡಲಾಗಿದೆ.
ನಗರದ ಕಿನ್ನಾಳ ರಸ್ತೆಯಲ್ಲಿರುವ ಶಾಂತಿ ನಿಕೇತನ ಕಟ್ಟಡ ಆವರಣದ, ಸೇಂಟ್ ಫಾಲ್ಸ್ ಪದವಿ ಕಾಲೇಜ್ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ಕಾಯ೯ಕ್ರಮ ನಡೆಯಲಿದೆ. ಭಾಗವಹಿಸುವ ಕವಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು. ಭಾಗವಹಿಸುವ ಆಸಕ್ತ ಕವಿಗಳು, ಕವಿಯಿತ್ರಿಯರು ತಮ್ಮ ಹೆಸರನ್ನು ಶಿವಪ್ರಸಾದ್ ಹಾದಿಮನಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಕೊಪ್ಪಳ ಮೊ:79967 90189 ಗೆ ತಮ್ಮ ಹೆಸರನ್ನು ನವಂಬರ್ 25 ರ ಒಳಗಾಗಿ ನೋಂದಾಯಿಸಿಕೊಳ್ಳಲು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ನೂತನ ಜಿಲ್ಲಾಧ್ಯಕ್ಷ ರುದ್ರಪ್ಪಭಂಡಾರಿ ತಿಳಿಸಿದ್ದಾರೆ.
