ನಾಳೆ ಮಸಬಹಂಚಿನಾಳ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ…..

ಕನ್ನಡಮ್ಮ ಸುದ್ದಿ : ಕುಕನೂರ ತಾಲೂಕಿನ ಮಸಬಹಂಚಿನಾಳ ಆರಾಧ್ಯ ದೈವವಾದ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವವು ಸೋಮವಾರ ಜರಗುವುದು.
ಬಹುತೇಕ ಮಾರುತೇಶ್ವರ ದೇವಸ್ಥಾನಗಳು ದಕ್ಷಿಣ ಅಭಿಮುಖವಾಗಿ ಇರುತ್ತವೆ, ಆದರೆ ಮಸಬಹಂಚಿನಾಳ ಮಾರುತೇಶ್ವರ ದೇವಸ್ಥಾನವು ಪಶ್ಚಿಮಾಭಿಮುಖ ವಾಗಿರುವುದು ಇದು ಈ ದೇವಸ್ಥಾನದ ವಿಶೇಷತೆ, ಈ ಕಾರ್ತಿಕೋತ್ಸವದಿಂದ ವರ್ಷದ ಪ್ರಾರಂಭಿಕ ಧಾರ್ಮಿಕ ಪ್ರಾರಂಭವಾಗುತ್ತವೆ.
ಶ್ರೀ ಮಾರುತೇಶ್ವರ ದೇವಸ್ಥಾನದ ಸೇವಾ ಸಮಿತಿಯಿಂದ ಮಸಬಹಂಚಿನಾಳ ಗ್ರಾಮದ ಮಾರುತೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕಾರ್ಯವು ಕಳೆದ ಒಂದು ವರ್ಷದಿಂದ ನಿರಂತರ ಸಾಗಿದೆ ಅಂತಿಮ ಘಟ್ಟ ತಲುಪಿದೆ .

ಈ ಮಾರುತೇಶ್ವರ ದೇವಸ್ಥಾನ ಕುಕನೂರು ತಾಲೂಕಿನಲ್ಲಿ ಅಪಾರ ಭಕ್ತ ಬಳಗವನ್ನು ಹೊಂದಿದೆ , ಪ್ರತಿ ಶನಿವಾರ ಮತ್ತು ಅಮಾವಾಸ್ಯ ದಿನ ಭಕ್ತರು ಈ ದೇವಸ್ಥಾನಕ್ಕೆ ಕಾಲು ನಡೆಗೆಯಲ್ಲಿ ಹೋಗಿ ಅಲ್ಲೇ ಉಳಿದುಕೊಂಡು ಶ್ರೀ ಮಾರುತೇಶ್ವರರ ಕೃಪೆಗೆ ಪಾತ್ರರಾಗಿ, ತಮ್ಮ ಇಷ್ಟಾರ್ಥ ಸಲ್ಲಿಸಿ ಬೆಳಗ್ಗೆ ಬರುತ್ತಾರೆ.
ಶ್ರೀ ಮಾರುತೇಶ್ವರ ದೇವಸ್ಥಾನ ಈಗ ನಾಳಿನ ಕಾರ್ತಿಕೋತ್ಸವಕ್ಕಾಗಿ ಬಣ್ಣ ಬಣ್ಣದ ಲೈಟಿಗಳಿಂದ ದೇವಸ್ಥಾನವನ್ನು ಸಿಂಗಾರಗೊಳಿಸಲಾಗಿದೆ ದೇವಸ್ಥಾನ ರಾತ್ರಿ ಸಮಯದಲ್ಲಿ ಲೈಟಿಂದ ಬೆಳಕಿನಿಂದ ಕಂಗೊಳಿಸುತ್ತದೆ. ಪ್ರತಿವರ್ಷದಂತೆ ಈ ವರ್ಷವೂ ಕಾರ್ತಿಕೋತ್ಸವ ಬರುವ ಭಕ್ತಾದಿಗಳಿಗಾಗಿ ಅನ್ನಮಹಾ ದಾಸೋಹವನ್ನು ಆಯೋಜಿಸಲಾಗಿದೆ.

ವರದಿ ಬಸವರಾಜ್ ಕೊಪ್ಪದ ಬಿನ್ನಾಳ
