‘ಮಕ್ಕಳು ಮಕ್ಕಳ ಚಾಚಾನ ದಿನಾಚರಣೆ ಚಂದಗೈದರು

ಕನ್ನಡಮ್ಮ ಸುದ್ದಿ ಕುಕನೂರ
ಭಾರತದ ಪ್ರಥಮ ಪ್ರಧಾನಮಂತ್ರಿ ಪಂಡಿತ ನೇಹರು ಅವರ ದಿನಾಚರಣೆಯನ್ನು ಪ್ರಥಮ ಮತ್ತು ದ್ವಿತೀಯ ಪಿಯುಸಿ ಓದುತ್ತಿರುವ ಮಕ್ಕಳು ಸರಕಾರಿ ಪದವಿ ಪೂರ್ವ ಕಾಲೇಜು ತಳಕಲ್ಲದಲ್ಲಿ ಅಚ್ಚುಕಟ್ಟಾಗಿ ಆಚರಣೆ ಮಾಡಿದರು.
ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ ಫಕೀರಪ್ಪ ವಜ್ರಬಂಡಿ ಅವರು ಉದ್ಘಾಟಿಸಿ, ಮಕ್ಕಳ ಮನಸ್ಸು ನಿಷಕಲ್ಮಷವಾಗಿದ್ದರಿಂದ ಅವರನ್ನು ದೇವರಿಗೆ ಸಮವೆಂದು ನಂಬಲಾಗಿದೆ. ಪ್ರಧಾನಿ ನೇಹರು ಅವರು ತಮ್ಮ ಬಿಡುವುದಿಲ್ಲದ ಸಂದರ್ಭದಲ್ಲಿಯೂ ಸಮಯಸಿಕ್ಕಾಗ ಶಾಲಾಮಕ್ಕಳೊಂದಿಗೆ ಕಾಲಕಳೆದು ತಮ್ಮ ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಂಡವರು. ಅಪಾರ ದೇಶಪ್ರೇಮಿಯವರಾಗಿರು ಅವರ ಅವರಂಥವರ ಆದರ್ಶಗಳನ್ನು ಮೈಗೂಡಿಸಿಕೊಂಡು ನಿಮ್ಮ ಕನಸಿನ ದೇಶವನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ್ವಿತೀಯಪಿಯುಸಿ ಪ್ರತಿಭಾ ವಡ್ಡರ ವಹಿಸಿ, ಇದೊಂದು ಹೊಸ ಅನುಭವ ಮತ್ತು ಹೊಸ ಜ್ಞಾನ ನಮಗೆ ಇಂತಹ ಹಲವಾರು ಕಾರ್ಯಕ್ರಮಗಳಿಂದ ಸಿಕ್ಕಿದೆಂದು ಹೇಳಿದಳು.
ವಿದ್ಯಾರ್ಥಿಗಳಾದ ಪಾರ್ವತಿ ನಿಟ್ಟಾಲಿ, ಭಾಗ್ಯಶ್ರೀ ಬಡಿಗೇರ, ಮಲ್ಲಿಕಾರ್ಜುನ ಮುಸ್ಲಿ ಮತ್ತಿತರರು ನೇಹರುಜಿ ಅವರ ಬಾಲ್ಯ, ವ್ಯಕ್ತಿತ್ವ, ಪ್ರಧಾನಮಂತ್ರಿ ಹುದ್ದೆಯ ನಿಭಾಯಿಸಿದ ರೀತಿ ಮತ್ತು ಅಂತರರಾಷ್ಟ್ರೀಯ ಪ್ರಭಾವ ಕುರಿತು ಮಾತನಾಡಿದರು.
ಮುಖ್ಯಅತಿಥಿಗಳಾಗಿ ಅಕ್ಷತಾ ಗೊಲ್ಲರ, ಫಯಾಜ್ ಗವಿಸಿದ್ಧಪ್ಪ ಯೋಗಮ್ಮನವರ ಭಾಗವಹಿಸಿ ಮಾತನಾಡಿದರು.
ಉಪನ್ಯಾಸಕರಾದ ಶ್ರೀಮತಿ. ಶಿವಲೀಲಾ ಹಿರೇಮಠ, ಗಿರಿಜಾ ಕನ್ನಾರಿ, ಮುಯೀಝ ಫಾತಿಮಾ, ಈರಣ್ಣ ಹುರಕಡ್ಲಿ, ಮುನಾಫ್ ಪಾಷ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾವ್ಯ ಹಳ್ಳಿಕೇರಿ ಪ್ರಾರ್ಥನೆ ಮಾಡಿದಳು. ಮಲ್ಲಿಕಾರ್ಜುನ ಚಂಡೂರು ಸ್ವಾಗತಿಸಿದರೆ ಸುನಿತಾ ಕಂಬಳಿ ಕಾರ್ಯಕ್ರಮವನ್ನು ಸಂಯೋಜಿಸಿ ನೀರೂಪಿಸಿದಳು. ಬಸವರಾಜ ವಂದಿಸಿದನು.
