ವಿದ್ಯಾನಂದ ಗುರುಕುಲ ಅಂದಾನಪ್ಪ ಹೊಸಮನಿ ಪದವಿ ಕಾಲೇಜನಲ್ಲಿ
ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳಿಂದ ಪ್ರತಿಭಟನೆ.

ಕನ್ನಡಮ್ಮ ಸುದ್ದಿ ಕುಕನೂರು.
ಪಟ್ಟಣದ ವಿದ್ಯಾನಂದ ಗುರುಕುಲದ ಅಂದಾನಪ್ಪ ಹೊಸಮನಿ ಗ್ರಾಮೀಣ ಪ್ರಥಮ ದರ್ಜೆ ಕಾಲೇಜನಲ್ಲಿ ವಿದ್ಯಾರ್ಥಿಗಳಿಗೆ ಸರಿಯಾಗಿ ಶಿಕ್ಷಣ ನೀಡುತ್ತಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಕಾಲೇಜ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳು ಮಾತನಾಡಿ, ಕಳೇದ ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಪ್ರಾಚಾರ್ಯರರು ಸೇರಿದಂತೆ ಸಂಪೂರ್ಣ ಆಡಳಿತ ಮಂಡಳಿಯವರು ವಿಫಲರಾಗಿದ್ದಾರೆ. ಪದವಿ ಕಾಲೇಜನಲ್ಲಿ ಬಿಎ, ಬಿಕಾಂ ಕೋರ್ಸ್ ಇದ್ದು, ನೂರಾರು ವಿದ್ಯಾರ್ಥಿಗಳು ಶಿಕ್ಷಣಕ್ಕೆಂದು ಕಾಲೇಜಗೆ ಪ್ರವೇಶ ಪಡೆದರೆ ಪ್ರತಿನಿತ್ಯ ಒಂದಿಲ್ಲ ಒಂದು ಸಮಸ್ಯೆಯಿಂದ ಇಲ್ಲಿ ನಾವು ಅಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರವೇಶಕ್ಕೆ ಪ್ರತಿಯೊಬ್ಬ ವಿದ್ಯಾರ್ಥಿಗಳಿಂದ ೮ ರಿಂದ ೯ ಸಾವಿರ ಶುಲ್ಕವನ್ನು ಪಡೆಯುತ್ತಾರೆ, ಶುಲ್ಕತಕ್ಕಂತೆ ಪುಸ್ತಕ, ಗ್ರಂಥಾಲಯ, ಕಂಪ್ಯೋಟರ್ ಇತರೆ ಸೌಲಭ್ಯಗಳನ್ನು ನೀಡುತ್ತಿಲ್ಲ. ೦೮ ವಿಷಯಗಳ ಪುಸ್ತಕಕ್ಕೆ ಬರಿ ೦೩ ಜನ ಶಿಕ್ಷಕರು ಇದ್ದಾರೆ ಉಳಿದ ೦೫ ಸಬಜೆಕ್ಟ್ಗಳನ್ನು ನಾವೆ ಓದಿಕೊಳ್ಳಬೇಕಾದ ಅನಿವಾರ್ಯ ಇದೆ. ಬರುವ ೦೩ ಜನ ಶಿಕ್ಷಕರಿಗೆ ೬ ತಿಂಗಳಿAದ ವೇತನ ಬಿಡುಗಡೆ ಮಾಡಿಲ್ಲ ಅವರಿಗೆ ಜೀವನ ನಡೆಸಲು ತುಂಬಾ ಸಮಸ್ಯೆಯಾಗಿದೆ. ಪದವಿ ಕಾಲೇಜನಲ್ಲಿ ಎನ್‌ಎಸ್‌ಎಸ್, ಕ್ರೀಡಾಕೂಟಕ್ಕೆ ಅನುಧಾನ ಬಂದರು ಯಾವುದೆ ಕಾರ್ಯಕ್ರಮಗಳನ್ನು ಮಾಡುತ್ತೀಲ್ಲ. ಪರೀಕ್ಷೆಯ ಹಾಲ್‌ಟಿಕೆಟ್‌ಗೆ ಪ್ರತಿಯೊಬ್ಬರಿಗೂ ೧೦೦ ರೂ. ಪಡೆಯುತ್ತಾರೆ. ಒಟ್ಟಾರೆಯಾಗಿ ಆಡಳಿತ ಮಂಡಳಿ ಪದವಿ ಕಾಲೇಜನ ನಡೆಸಲು ವಿಫಲವಾಗುತ್ತಿದೆ. ಇದಕ್ಕೆ ಸಂಬAಧಿಸಿದ ಮೇಲಾಧಿಕಾರಿಗಳು ನಮ್ಮ ಸಮಸ್ಯೆಯನ್ನು ಬಗೆಹರಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
—
