Monday, November 23, 2026
HomeHeadlinesರಾಜ್ಯದಲ್ಲಿ ವೀರಶೈವ ಲಿಂಗಾಯತ ಮಹಾಸಭಾದಿಂದಲೇ ಪ್ರತ್ಯೇಕ ಜಾತಿಗಣತಿಗೆ ಸರ್ಕಾರಕ್ಕೆ ಮನವಿ : ಕೆ.ಬಿ.ಶ್ರೀನಿವಾಸರೆಡ್ಡಿ

ರಾಜ್ಯದಲ್ಲಿ ವೀರಶೈವ ಲಿಂಗಾಯತ ಮಹಾಸಭಾದಿಂದಲೇ ಪ್ರತ್ಯೇಕ ಜಾತಿಗಣತಿಗೆ ಸರ್ಕಾರಕ್ಕೆ ಮನವಿ : ಕೆ.ಬಿ.ಶ್ರೀನಿವಾಸರೆಡ್ಡಿ

ಕೊಪ್ಪಳ ಜಿಲ್ಲೆಯಲ್ಲಿ ವೀರಶೈವ ಲಿಂಗಾಯತ ಮಹಾಸಭಾ ಸಂಘಟನೆ, ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ರಾಜ್ಯ ಉಪಾಧ್ಯಕರಾದ ಕೆ.ಬಿ.ಶ್ರೀನಿವಾಸರೆಡ್ಡಿ ಅವರಿಂದ ಚಾಲನೆ

ಕನ್ನಡಮ್ಮ ಸುದ್ದಿ-ಕೊಪ್ಪಳ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಡಿಯಲ್ಲಿ ಬರುವ ನೂರಕ್ಕೂ ಹೆಚ್ಚು ಎಲ್ಲ ಒಳಪಂಗಡಗಳ ಒಳಗೊಂಡು ಮಹಾಸಭಾ ರಚನೆಯಾಗಿದ್ದು, ರಾಜ್ಯದಲ್ಲಿ ಆಗಿರುವ ಜನಗಣತಿಯಲ್ಲಿ ವೀರಶೈವ ಲಿಂಗಾಯತದ ಬಗ್ಗೆ ಸ್ಪಷ್ಟವಾದ ಮಾಹಿತಿ ಇರದ ಕಾರಣ ಮಹಾಸಭಾದಿಂದಲೇ ಜನಗಣತಿಗೆ ಅವಕಾಶ ಮಾಡಿಕೊಡಲು ಸರ್ಕಾರಕ್ಕೆ ಮನವಿ ಸಲ್ಲಿಸಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕರಾದ ಕೆ.ಬಿ.ಶ್ರೀನಿವಾಸರೆಡ್ಡಿ ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಹಾಸಭಾ ಸಂಘಟನೆ ಮತ್ತು ಸದಸ್ಯತ್ವ ಅಭಿಯಾನ ಪ್ರಾರಂಭಿಸಿದೆ , 28 ಜಿಲ್ಲೆಗಳಲ್ಲಿ ಜಿಲ್ಲಾ ಸಮಿತಿಯನ್ನು ರಚಿಸಲಾಗಿದೆ, ಕೊಪ್ಪಳ ಜಿಲ್ಲೆಯ ಯುವ ಘಟಕ ಹಾಗೂ ಜಿಲ್ಲಾ ಯುವ ಮಹಿಳಾ ಘಟಕ ಹಾಗೂ ತಾಲೂಕ ಯುವ ಮತ್ತು ಮಹಿಳಾ ಘಟಕಗಳನ್ನು ರಚಿಸುವ ಮತ್ತು ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮಕ್ಕೆ ನಗರದ ಶ್ರೀ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ಚಾಲನೆ ನೀಡಿದೆ, ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವು ಯಾವುದೇ ಉಪಪಂಗಡಗಳಿಗೆ ಪ್ರತ್ಯೇಕ ಹೋರಾಟ ನಡೆಸುವದಿಲ್ಲ, ಅದೇ ರೀತಿ 2ಎ ಮೀಸಲಾತಿಗಾಗಿ ಪಂಚಮಸಾಲಿ ಸಮಾಜದವರು ನಡೆಸಿರುವ ಹೋರಾಟಕ್ಕೆ ಮಹಾಸಭಾದ ಬೆಂಬಲ ಇಲ್ಲವೆಂದು ಸ್ಪಷ್ಟಪಡಿಸಿದರು.

ಈಗಾಗಲೇ ಕೊಪ್ಪಳ ಜಿಲ್ಲೆಯ ಜಿಲ್ಲಾ ಸಮಿತಿ ರಚಿಸಿದೆ, ಮೂರು ತಾಲೂಕ ಘಟಕಗಳ ರಚಿಸಿದ್ದು ಇನ್ನೂ ನಾಲ್ಕು ತಾಲ್ಲೂಕಿನ ಘಟಕಗಳನ್ನು  ರಚನೆ ಮಾಡಲಾಗುತ್ತದೆ. ಹಾಗೂ ಮಹಿಳಾ, ಯುವ ಘಟಕಗಳ ರಚನೆ ಮಾಡಲಾಗುತ್ತದೆ. ಮೂರು ನೂರು ಸದಸ್ಯರ ನೋಂದಣೆ ಆದ ಮೇಲೆ ಆಯಾ ತಾಲ್ಲೂಕಿನ ನಲ್ಲಿ ಸಮಿತಿಗಳನ್ನು ರಚಿಸಲಾಗುವುದು,  ಹತ್ತು ಸಾವಿರ ಸದಸ್ಯತ್ವವನ್ನು ಮಾಡಿಸಲು ಗುರಿ ಹೊಂದಿದೆ,

ಮಹಾಸಭಾ ಸಂಸ್ಥೆಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಲೋಕಾರ್ಪಣೆ ಮಾಡಲಾಗಿದೆ, ಕೊಪ್ಪಳ ನಗರದಲ್ಲಿ  ವಿದ್ಯಾರ್ಥಿ  ವಸತಿ ನಿಲಯ ಸ್ಥಾಪಿಸಲು ಎರಡು ರಿಂದ ಮೂರು ಎಕರೆ ಸರ್ಕಾರಿ  ಜಮೀನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಕಳಕನಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿ ಶಿವಪುತ್ರಪ್ಪ ಕಾಡಪ್ಪನವರ್, ಕೊಪ್ಪಳ ತಾಲೂಕ ಅಧ್ಯಕ್ಷ ನಾಗಭೂಷಣ ಸಾಲಿಮಠ, ಜಿಲ್ಲಾ ಕಾರ್ಯದರ್ಶಿ ರಮೇಶ್ ಕವಲೂರು ಇದ್ದರು.
Total Views 20
RELATED ARTICLES

Most Popular

Recent Comments

KNN City News
Home
E-Paper