Monday, November 23, 2026

ಕುಕನೂರು ಪಶು ಆಸ್ಪತ್ರೆಗೆ ಪಾಲಿ ಕ್ಲಿನಿಕ್ ಆಸ್ಪತ್ರೆಯಾಗಿ ಮೇಲ್ದರ್ಜೆಗೆ.

Oplus_131072

 

ಕನ್ನಡಮ್ಮ ಸುದ್ದಿ : ಕುಕನೂರಿನ ಪಟ್ಟಣದ ಪಶು ಆಸ್ಪತ್ರೆಯನ್ನು ಪಾಲಿ ಕ್ಲಿನಿಕ್ ಜಿಲ್ಲಾ ಹಂತದ ಆಸ್ಪತ್ರೆಯಾಗಿ ರಾಜ್ಯ ಸರ್ಕಾರ ರಾಜ್ಯದಲ್ಲಿ 20 ಆಸ್ಪತ್ರೆಗಳನ್ನು ಪಾನಿ ಕ್ಲಿನಿಕ್ ಆಸ್ಪತ್ರೆಯಾಗಿ ಆದೇಶ ನೀಡಿದೆ ಅದರಲ್ಲಿ ಕುಕನೂರಿನ ಪಟ್ಟಣದ ಪಶು ಆಸ್ಪತ್ರೆ ಕೂಡ ಒಂದು ಶುಕ್ರವಾರ ( ನ 29 ) ಕುಕನೂರಿನ ಪಶು ಆಸ್ಪತ್ರೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರದ ಬಸವರಾಜ ರಾಯರೆಡ್ಡಿ ಅವರು ಹೇಳಿದರು.

ಪಾಲಿ ಕ್ಲಿನಿಕ್ ಆಸ್ಪತ್ರೆಯ ಆಧುನಿಕ ಚಿಕಿತ್ಸೆಯ ವಿಧಾನಗಳಿಂದ ಕೂಡಿರುವ ಜಿಲ್ಲಾ ಹಂತದಲ್ಲಿರುವ ಪಶು ಆಸ್ಪತ್ರೆ ಈಗ ತಾಲೂಕ್ ಹಂತಕ್ಕೆ ವಿಸ್ತರಣೆಗೊಂಡಿದೆ.

ಇದರ ಬಗ್ಗೆ ರೈತರಿಗೆ ತಿಳಿಯಪಡಿಸಬೇಕೆಂದು ವೈದ್ಯ ಅಧಿಕಾರಿಗಳಿಗೆ ಸೂಚಿಸಿದರು.

 

ಪಾಲಿ ಕ್ಲಿನಿಕ್ ಅತ್ಯಾಧುನಿಕ ಪರಿಕರಗಳನ್ನು ಹೊಂದಲಿದ್ದು, ದೊಡ್ಡ ಮೌಲ್ಯದ ಅಲ್ಪಾ ಸ್ಕ್ಯಾನಿಂಗ್ ಯಂತ್ರ ಬಂದಿದೆ. ಪ್ರಾಣಿಗಳ ಆರೋಗ್ಯದಲ್ಲಿ ದೇಹದ ಒಳಗಿನ ನ್ಯೂನತೆ, ಅಂಗವೈಕಲ್ಯ, ಗರ್ಭಾವಸ್ಥೆಯಲ್ಲಿ ಮರಿಗಳ ಆರೋಗ್ಯ ಸ್ಥಿತಿಗತಿ ತಿಳಿಯಬಹುದು. ಎಕ್ಸ್‌ರೇ, ರಕ್ತ ಮಾದರಿ ಪರೀಕ್ಷೆ, ಕ್ಲಿನಿಕಲ್ ಲ್ಯಾಬ್‌ಗಳನ್ನು ಈ ಪಾಲಿಕ್ಲಿನಿಕ್ ಹೊಂದಿದೆ ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಮಲ್ಲಯ್ಯ ತಿಳಿಸಿದರು.

ಸಿಬ್ಬಂದಿ, ವೈದ್ಯರ ಕೊರತೆ: ತಾಲೂಕಿನ 19 ಪಶು ವೈದ್ಯಕೀಯ ಆಸ್ಪತ್ರೆಗಳಲ್ಲಿ ಪಶುಪಾಲನಾ ಇಲಾಖೆಯಲ್ಲಿ ಸಿಬ್ಬಂದಿ, ವೈದ್ಯರ ಕೊರತೆ ಗಂಭೀರವಾಗಿದೆ. ಪ್ರಸ್ತುತ ವೈದ್ಯರ ಹುದ್ದೆ ಕೊರತೆ ಇದೆ . ಪಶು ವೈದ್ಯಾಧಿಕಾರಿ, ಸಹಾಯಕ ಆಡಳಿತಾಧಿಕಾರಿ, ಜಾನುವಾರು ಅಧಿಕಾರಿ, ಪಶುವೈದ್ಯಕೀಯ ಪರೀಕ್ಷಕ, ಸಹಾಯಕರು, ಡಿ ದರ್ಜೆ ನೌಕರರು ಸೇರಿದಂತೆ ಹುದ್ದೆಗಳು ಖಾಲಿ ಇದ್ದು, ಇಲಾಖೆ ಕೆಲಸಗಳಿಗೆ ಸಮಸ್ಯೆಯಾಗುತ್ತಿದೆ.

ಮುಂದಿನ ದಿನಗಳಲ್ಲಿ ಹಂತಂತವಾಗಿ ವೈದ್ಯ ಅಧಿಕಾರಿಗಳನ್ನು ಸರ್ಕಾರ ನೇಮಿಸಿಕೊಳ್ಳಲಾಗುವುದು ಕುಕನೂರು ತಾಲೂಕು ಉಪ ನಿರ್ದೇಶಕರಾದ ಶಿವರಾಜ್ ಶೆಟ್ಟರ್ ಹೇಳಿದರು .

ಈ ಸಂದರ್ಭದಲ್ಲಿ ಸತ್ಯನಾರಾಯಣಪ್ಪ, ಕುಕನೂರು ಬ್ಲಾಕ್ ಕಾಂಗ್ರೆಸ್ ವಕ್ತರಾದ ಸಂಗಮೇಶ್ ಗುತ್ತಿ, ಮೊಮ್ಮದ್ ರಫಿ, ಹರಪನಹಳ್ಳಿ, ಗಗನ್ ನೋಟ್ಗಾರ್, ಮಂಜುನಾಥ್ ಯಡಿಯಾಪುರ್, ರಾಮಣ್ಣ ಬಂಕದಮನಿ, ಮಂಜುನಾಥ್ ಕಡೆಮನಿ ಪ್ರಶಾಂತ್ ಆರಬೆರಳಿನ , ವೆಂಕಟೇಶ್ ವಡ್ಡರ್ ಇತರರಿದ್ದರು.

 

 

Total Views 136
RELATED ARTICLES

Most Popular

Recent Comments

KNN City News
Home
E-Paper