Monday, November 23, 2026
HomeKoppalವಿದ್ಯಾರ್ಥಿಗಳಲ್ಲಿ ಅದ್ಬುತವಾದ ಜ್ಞಾನಯಿದೆ ಅದನ್ನು ಸದುಪಯೋಗ ಪಡಿಸಿಕೊಳ್ಳಿ : ಕಲ್ಲೇಶ ಬಿ

ವಿದ್ಯಾರ್ಥಿಗಳಲ್ಲಿ ಅದ್ಬುತವಾದ ಜ್ಞಾನಯಿದೆ ಅದನ್ನು ಸದುಪಯೋಗ ಪಡಿಸಿಕೊಳ್ಳಿ : ಕಲ್ಲೇಶ ಬಿ

ಕನ್ನಡಮ್ಮ ಸುದ್ದಿ-ಕೊಪ್ಪಳ : ವಿದ್ಯಾರ್ಥಿಗಳಲ್ಲಿ ಅದ್ಭುತವಾದ ಜ್ಞಾನವಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮುಖ್ಯ ಆಡಳಿತ ಅಧಿಕಾರಿ ಕಲ್ಲೇಶ ಬಿ ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರದಂದು 2024-25 ಸಾಲಿನ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಮತ್ತು ಕಾಲೇಜಿನ ಎಲ್ಲ ಸಹ ಪಠ್ಯ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು. ವಿದ್ಯಾರ್ಥಿಗಳಲ್ಲಿ ಸ್ವಾವಲಂಬನೆ ಇರಬೇಕು ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ನಿಮ್ಮ ಗುರಿಗಳನ್ನು ಸಾಧಿಸಬೇಕು ಎಂದರು.

ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಮಾತನಾಡಿ ಕಾಲೇಜಿನಲ್ಲಿರುವ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ನಮ್ಮ ಕಾಲೇಜು ಬಹು ಬೇಗನೆ ಅಭಿವೃದ್ಧಿಹೊಂದಿದ್ದು, ಬಡ ವಿದ್ಯಾರ್ಥಿಗಳಿಗೆ ಸರಕಾರಿ ಕಾಲೇಜುಗಳು ಬಹಳ ಉಪಯುಕ್ತವಾಗಿವೆ ಎಂದರು. ಈ ಸಂದರ್ಭದಲ್ಲಿ ಸಾಂಸ್ಕೃತಿಕ ವಿಭಾಗದ ಸಂಚಾಲಾಕಿ ಡಾ. ಹುಲಿಗೆಮ್ಮ, ಶಿಕ್ಷಣ ಪ್ರೇಮಿ ಬಿ. ಜಿ ಕರಿಗಾರ್, ಕ್ರೀಡಾ ವಿಭಾಗದ ಮುಖ್ಯಸ್ಥ ಡಾ.ಪ್ರದೀಪ್ ಕುಮಾರ, ಗ್ರಂಥಾಪಾಲಕ ಡಾ. ಮಲ್ಲಿಕಾರ್ಜುನ, ಉಪನ್ಯಾಸಕರಾದ ಡಾ. ನರಸಿಂಹ, ಡಾ. ಅಶೋಕ ಕುಮಾರ್, ಶುಭ, ಸುಮಿತ್ರಾ ಎಸ್. ವಿ. ವಿರೂಪಾಕ್ಷಪ್ಪ ಮುತ್ತಾಳ, ಶಿವಪ್ರಸಾದ್ ಹಾದಿಮನಿ, ಶ್ರೀ ಕಾಂತ್, ಬೊಮ್ಮನಾಳ,  ಇದ್ದರು. ಭೂಮಿಕಾ ಮತ್ತು ಸಬಿಹಾ ನಿರೂಪಿಸಿದರು, ಮಹಾದೇವಿ ಪ್ರಾರ್ಥಿಸಿದರು, ನೇತ್ರಾ ಸ್ವಾಗತಿಸಿದರು. ಭವ್ಯ ವಂದಿಸಿದರು,

Total Views 41
RELATED ARTICLES

Most Popular

Recent Comments

KNN City News
Home
E-Paper