Monday, November 23, 2026
HomeKoppalವಿಜ್ಞಾನ ಸಂಶೋಧನೆಯಿಂದ ಸಾಮಾಜಿಕ ಬದಲಾವಣೆ ಸಾಧ್ಯ: ಕಾವ್ಯಚತುರ್ವೇದಿ

ವಿಜ್ಞಾನ ಸಂಶೋಧನೆಯಿಂದ ಸಾಮಾಜಿಕ ಬದಲಾವಣೆ ಸಾಧ್ಯ: ಕಾವ್ಯಚತುರ್ವೇದಿ

ಕನ್ನಡಮ್ಮ ಸುದ್ದಿ-ಕೊಪ್ಪಳ : ಶ್ರೀ ಗವಿಸಿದ್ದೇಶ್ವರ ಕಲಾ ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನವನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯಚತುರ್ವೇದಿ ಉದ್ಘಾಟಿಸಿ ಮಕ್ಕಳು ಕಲಿಕೆಯಜೊತೆಗೆ ವಿಜ್ಞಾನದಲ್ಲಿ ಸಂಶೋಧನಾ ಆಸಕ್ತಿ ಬೆಳೆಸಿಕೊಳ್ಳಲು ತಿಳಿಸಿದರು. ನೆಹರು ಯುವ ಕೇಂದ್ರದ ರಾಮರಾವ್‌ ಆರ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಡಾ.ಚನ್ನಬಸವ ಅಧ್ಯಕ್ಷತೆಯನ್ನು ವಹಿಸಿದ್ದರು. ವಿಜ್ಞಾನ ಮೇಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು ಮತ್ತು ಜಿಲ್ಲಾ ಮಟ್ಟದಲ್ಲಿ ಆಯ್ಕೆಗೊಂಡವರನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಯಿತು. ಡಾ.ಮಂಜುನಾಥ ಎಂ., ಮುಖ್ಯಸ್ಥರು, ಭೌತಶಾಸ್ತç ವಿಭಾಗ,  ಸಹಾಯಕ ಪ್ರಾಧ್ಯಾಪಕ ಶರಣಪ್ಪ, ಜಾಲಿಹಾಳ ಶರಣಪ್ಪ, ಪ್ರಶಾಂತ ಕೊಂಕಲ, ಸುಂದರ ಮೇಟಿ, ಶಶಿಕಾಂತ ಉಮ್ಮಾಪುರೆ, ವೆಂಕಟೇಶ ನಾಯ್ಕ, ಪ್ರವೀಣ ಹಾದಿಮನಿ ಮತ್ತಿತರರು ಪಾಲ್ಗೊಂಡಿದ್ದರು.

Total Views 13
RELATED ARTICLES

Most Popular

Recent Comments

KNN City News
Home
E-Paper