Monday, November 23, 2026
HomeKoppalನೊಂದವರಿಗೆ ನ್ಯಾಯ ದೊರಕಲು ನ್ಯಾಯವಾದಿಗಳಾಗಿ: ಡಾ.ಸಿ.ರಾಜಶೇಖರ

ನೊಂದವರಿಗೆ ನ್ಯಾಯ ದೊರಕಲು ನ್ಯಾಯವಾದಿಗಳಾಗಿ: ಡಾ.ಸಿ.ರಾಜಶೇಖರ

ಶಿವಪ್ರೀಯಾ ಕಾನೂನು ವಿದ್ಯಾಲಯದಲ್ಲಿ ಮೊದಲನೇ ವರ್ಷದ ಕಾನೂನು ವಿದ್ಯಾರ್ಥಿಗಳಿಗೆ  ಸ್ವಾಗತ ಸಮಾರಂಭ

ಕನ್ನಡಮ್ಮ ಸುದ್ದಿ-ಕೊಪ್ಪಳ: ನೊಂದವರು ಹಾಗೂ ದಿನ ದಲಿತರಿಗೆ ಹಾಗೂ ಅನ್ಯಾಯ ಮತ್ತು ತುಳಿತಕ್ಕೋಳಗಾದವರ ಪರವಾಗಿ ದ್ವನಿ ಎತ್ತಲು ಯುವಕರು ಮುಂದಾಗಬೇಕು ಎಂದು ಡಾ.ಸಿ ರಾಜಶೇಖರ ಹೇಳಿದರು.

ಕೊಪ್ಪಳ ರಸ್ತೆಯಲ್ಲಿರುವ ಶಿವಪ್ರೀಯಾ ಕಾನೂನು ವಿದ್ಯಾಲಯದಲ್ಲಿ ಮೊದಲನೇ ವರ್ಷದ ಕಾನೂನು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕಾನೂನಿನ ಪದವಿ ಪಡೆಯುವ ಇಚ್ಛೆಯಿಂದ ಹೊಸದಾಗಿ ಆಗಮಿಸಿದ ಎಲ್ಲಾ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉತ್ತಮ ವಿದ್ಯಾಭ್ಯಾಸವನ್ನು ಪಡೆಯಬೇಕು ಹಾಗೂ ಸರ್ವರಿಗೂ ನ್ಯಾಯ ದೊರಕಿಸುವ ಕೆಲಸ ನಿಮ್ಮಿಂದ ಆಗಬೇಕು ಎಂದರು.

ಹಿರಿಯ ನ್ಯಾಯವಾದಿ ಹಾಗೂ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಸದಸ್ಯರಾದ ಆಸಿಪ್ ಅಲಿಯವರು ಮಾತನಾಡಿ ಭಾರತದಲ್ಲಿರುವ ನ್ಯಾಯಾಂಗ ವ್ಯವಸ್ಥೆ ಅತ್ಯಂತ ಸುಭದ್ರವಾಗಿರುವದು ಹಾಗೂ ಸರ್ವರಿಗೂ ಸಮಪಾಲು ಸಮಬಾಳು ಎನ್ನುವಂತೆ ಉಳ್ಳವರಿಗೂ ಇಲ್ಲದವರಿಗೂ ಒಂದೆ ತರನಾದಂತಹ ಕಾನೂನು ಇದ್ದು ಅದರ ಬಗ್ಗೆ ಅತ್ಯಂತ ಶ್ರದ್ಧೆ ಹಾಗೂ ನಿಷ್ಠೆಯಿಂದ ಅಭ್ಯಾಸ ಮಾಡಬೇಕು ಹಾಗೂ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡುವಂತಾಗಬೇಕು ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ಎ.ವ್ಹಿ.ಕಣವಿ.ಕಾಲೇಜು ಉಪಾಧ್ಯಕ್ಷ ಆರ್ ಬಿ ಪಾನಘಂಟಿ.ಕಾರ್ಯದರ್ಶಿ ರಾಜಶೇಖರ ಹನಸಿ. ಪ್ರ.ಕಾ.ಸೋಮಶೇಖರ್. ಸಹ ಕಾರ್ಯದರ್ಶಿ ವಿಜಯಕುಮಾರ್ ಕಂಬಳಿ. ಪ್ರಾಚಾರ್ಯ ಡಾ.ಬಸವರಾಜ ಹನಸಿ. ಸಿಂಡಿಕೇಟ್ ಸದಸ್ಯ ಡಾ.ಎಚ್ ವ್ಹಿ ಬೆಳಗಲಿ.ಹಿರಿಯ ವಕೀಲರಾದ ಪೀರಾ ಹುಸೇನ್ ಹೊಸಳ್ಳಿ. ಎಸ್.ಜಿ.ಪಾಟೀಲ ಸೇರಿದಂತೆ ಕಾಲೇಜಿನ ಎಲ್ಲಾ ಉಪನ್ಯಾಸಕರು ವಿದ್ಯಾರ್ಥಿಗಳು ಹಾಜರಿದ್ದರು.

Total Views 51
RELATED ARTICLES

Most Popular

Recent Comments

KNN City News
Home
E-Paper