ಕನ್ನಡಮ್ಮ ಸುದ್ದಿ-ಕೊಪ್ಪಳ ಕಟ್ಟಡ ಇತರೆ ನಿರ್ಮಾಣ ಕಾರ್ಮಿಕ ಕಾರ್ಮಿಕ ಬೇಡಿಕೆಗಳನ್ನು ಈಡೇರಿಸುವುಂತೆ ಎ ಐ ಯು ಟಿ ಯು ಸಿ ಗೆ ಸಂಯೋಜಿತ ಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳು ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಸುಧಾ ಗರಗ ಅವರಿಗೆ ಮನವಿ ಸಲ್ಲಿಸಿದರು.
ಶೈಕ್ಷಣಿಕ ಸಹಾಯಧನ, ಮದುವೆ ಸಹಾಯದನ, ಆರೋಗ್ಯ ಸಹಾಯಧನ, ಡೆಲೆವರಿ, ಇನ್ನಿತರ ಸೌಲಭ್ಯಗಳು ಸರಿಯಾದ ರೀತಿಯಲ್ಲಿ ಎಲ್ಲಾ ಅರ್ಹತೆ ಹೊಂದಿದ ಕಾರ್ಮಿಕರಿಗೆ ಕಾಲದ ಮಿತಿಯಲ್ಲಿ ಒದಗಿಸಬೇಕು. ಕಾರ್ಮಿಕರಿಗೆ ಸರ್ಕಾರದಿಂದ ಘೋಷಿಸಿದ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ ಇನ್ನಿತರ ಸಮಸ್ಯೆಗಳ ಪರಿಹಾರಕ್ಕೆ ಸಂಘಟನೆಯ ಜಿಲ್ಲಾ ಸಂಚಾಲಕರಾದ ಶರಣು ಗಡ್ಡಿ, ಮುಖಂಡರಾದ ನಾಗಪ್ಪ ಬಿಕ್ಕನಹಳ್ಳಿ, ಮುಖಾಂಡರಾದ ಮಂಗಳೇಶ ರಾತೋಡ್, ಹನುಮಂತ ಕಟೀಗಿ, ಈರಣ್ಣ ತಾಳಕನಕಪುರ, ಇತರರು ಒತ್ತಾಯಿಸಿ ಮನವಿ ಸಲ್ಲಿಸಿದರು.
ಕಟ್ಟಡ ಇತರೆ ನಿರ್ಮಾಣ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಮನವಿ
Total Views 23
