Monday, November 23, 2026
HomeBelagaviಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಿಗೆ ಲಕ್ಷಾಂತರ ಸಂಬಳ: ಸೇವೆ ಕೊಡುವುದು ಖಾಸಗಿ ಆಸ್ಪತ್ರೆಯಲ್ಲಿ

ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಿಗೆ ಲಕ್ಷಾಂತರ ಸಂಬಳ: ಸೇವೆ ಕೊಡುವುದು ಖಾಸಗಿ ಆಸ್ಪತ್ರೆಯಲ್ಲಿ

ಬೆಳಗಾವಿ
ನಗರದ ಸರಕಾರಿ ಆಸ್ಪತ್ರೆಯಲ್ಲಿ ಲಕ್ಷಾಂತರ ರೂ. ಸಂಬಳ ಪಡೆದು ಸೇವೆ ಸಲ್ಲಿಸುತ್ತಿರುವ ಬಹುತೇಕ ಬಿಮ್ಸ್ ನಲ್ಲಿ ಕೆಲಸ‌ ಮಾಡುವ ವೈದ್ಯಾಧಿಕಾರಿಗಳ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ ಜಿಲ್ಲಾ ಆಸ್ಪತ್ರೆಗೆ ಬರುವ ರೋಗಿಗಳು ಚಿಕಿತ್ಸೆಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಿಮ್ಸ್ ಔಷಧಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಂದು ಡಾ. ಆಂಜನೇಯ ಯಡೂರ ಅವರಿಗೆ ಸರಕಾರ ಕಳೆದ 14-6-2023ರಲ್ಲಿ ನೇಮಕ ಮಾಡಿದೆ. ಇವರಿಗೆ ನೇಮಕಾತಿಯ ವೇಳೆ ಸರಕಾರದ ಆದೇಶದಲ್ಲಿ ಇವರಿಗೆ ಸ್ಪಷ್ಟವಾಗಿ ಆದೇಶ ಮಾಡಿದೆ. ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಬಾರದು ಎಂದು ಆದರೆ ಅನಗೋಳದ ಖಾಸಗಿ ಆಸ್ಪತ್ರೆ ಹಾಗೂ ಸೇವಾ ಸದನ ಮಲ್ಟಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವುದು ದುರಂತವಾಗಿದೆ.


ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಖಾಸಗಿ ಆಸ್ಪತ್ರೆ ತೆಗೆಯಬಾರದು ಎಂಬ ಸರಕಾರದ ಆದೇಶವಿದ್ದರೂ, ಇಲ್ಲಿನ ಆರೋಗ್ಯ ಆಸ್ಪತ್ರೆಯ ಉದ್ಘಾಟನೆಗೆ ಸಚಿವರು ಆಗಮಿಸುತ್ತಿರುವುದು ದುರ್ದೈವದ ಸಂಗತಿಯಾಗಿದೆ.
ಬೆಳಗಾವಿ ಬಿಮ್ಸ್‌ನಲ್ಲಿ ಹಾಜರಿ ಹಾಕಿ ಬೇರೆ ಖಾಸಗಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಹೆಚ್ಚಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ನುರಿತ ತಜ್ಞರ ಕೊರತೆ ಇದೆ. ಇದರ ಲಾಭ ಪಡೆದುಕೊಳ್ಳುತ್ತಿರುವ ಕೆಲ ವೈದ್ಯರು ರಾಜಾರೋಷವಾಗಿ ನಗರದಲ್ಲಿರುವ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ಬಡ ರೋಗಿಗಳ ಪಾಲಿಗೆ ಮಾರಕವಾಗಿದ್ದಾರೆ ಎನ್ನುವ ಆರೋಪ ಜಿಲ್ಲಾಸ್ಪತ್ರೆಯಲ್ಲಿ ಬಡ ರೋಗಿಗಳಿಂದ ಕೇಳಿ ಬಂದಿದೆ.
ಒಟ್ಟಾರೆ ಸರಕಾರಕ್ಕೆ ಋಣಿಯಾಗಬೇಕಿದ್ದ ವೈದ್ಯರು ಸರಕಾರದ ಸಂಬಳ ಪಡೆದು ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಮಾಡಿ ಬಡರೋಗಿಗಳಿಗೆ ಅನ್ಯಾಯ ‌ಮಾಡುತ್ತಿದ್ದಾರೆ. ಇನ್ನೊಂದು‌ ದಿ‌ನ ಬೆಳಗಾವಿ ಅಧಿವೇಶನ ‌ಇದೆ. ಸರಕಾರ ಇವರ ಮೇಲೆ‌ ಕ್ರಮ ಜರುಗಿಸಬೇಕು ಎಂಬುದು ಬಡ ರೋಗಿಗಳ ಕುಟುಂಬಸ್ಥರ ಆಗ್ರಹವಾಗಿದೆ.
–

 

Total Views 200
RELATED ARTICLES

Most Popular

Recent Comments

KNN City News
Home
E-Paper