Monday, November 23, 2026
HomeKoppalಸವಿತಾ ಸಮಾಜ ವಿವಿದೋದ್ದೇಶ ಸಹಕಾರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಸವಿತಾ ಸಮಾಜ ವಿವಿದೋದ್ದೇಶ ಸಹಕಾರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಕನ್ನಡಮ್ಮ ಸುದ್ದಿ-ಕೊಪ್ಪಳ: ಕೊಪ್ಪಳ ತಾಲ್ಲೂಕಿನ ಸವಿತಾ ಸಮಾಜ ವಿವಿದೋದ್ದೇಶ ಸಹಾಕರ ಸಂಘ ನಿಯಮಿತಕ್ಕೆ ಇಂದು ಜರುಗಿದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
 2024 ರಿಂದ 2029 ವರೆಗಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ನಾಗರಾಜ ಕಂಪ್ಲಿ ಹಾಗೂ ಉಪಾಧ್ಯಕ್ಷರಾಗಿ ಶಿವಮೂರ್ತಿ ಚಿಕ್ಕಮಾದಿನಾಳ ,
 ಕಾರ್ಯಕಾರಿ ನಿರ್ದೇಶಕ ಮಂಡಳಿಗೆ ದೇವಪ್ಪ ಕರ್ಕಿಹಳ್ಳಿ, ವಿಠ್ಠಲ ಗೌರಿಅಂಗಳ, ತುಕಾರಾಂ ಸವಿತಾ, ಮಾರುತಿ ಸೂಗೂರು, ಬಡಪ್ಪ ಮಲ್ಕಾಪುರ, ರಾಘವೇಂದ್ರ ಸವಿತಾ, ಮಹಿಳಾ ನಿರ್ದೇಶಕರಾಗಿ ಅಯ್ಯಮ್ಮ ಸವಿತಾ ಹಾಗೂ  ರಂಗಮ್ಮ ಸವಿತಾ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಜಿಲ್ಲಾ ಉಪನಿಬಂಧಕರ ಕಛೇರಿಯ ಪ್ರಥಮ ದರ್ಜೆಯ ಸಹಾಯಕರು ಹಾಗೂ ಸವಿತಾ ಸಮಾಜ ವಿವಿದೋದ್ಧೇಶ ಸಹಕಾರ ಸಂಘ ನಿಯಮಿತದ ಚುನಾವಣಾಧಿಕಾರಿಯಾಗಿದ್ದ ನಿರ್ಮಲಾ ಬ ಗದಗೇರಿ ಅವರು ನೂತನವಾಗಿ ಚುನಾಯಿತಗೊಂಡ ಪದಾಧಿಕಾರಿಗಳ ಆಯ್ಕೆಯನ್ನು ಘೋಷಿಸಿದರು.
 ಈ ಸಂದರ್ಭದಲ್ಲಿ ಸವಿತಾ ಸಮಾಜದ ಮುಖಂಡರಾದ ದೇವಪ್ಪ ಗೌರಿಅಂಗಳ, ರವಿಕುಮಾರ ಸೂಗೂರು, ಕಲ್ಲಪ್ಪ ಹೊನ್ನುಂಚಿ, ಈಶಪ್ಪ ಚಿಕ್ಕಮಾದಿನಾಳ, ಕಾರ್ಯದರ್ಶಿ ಯಲ್ಲಪ್ಪ ಸವಿತಾ, ಪಿಗ್ಮಿ ಏಜೆಂಟ್ ನಾಗರಾಜ ಸವಿತಾ, ಸಣ್ಣ ಯಲ್ಲಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು
.
Total Views 38
RELATED ARTICLES

Most Popular

Recent Comments

KNN City News
Home
E-Paper