Monday, November 23, 2026
HomeBelagaviರಾತ್ರಿಯಿಡೀ ಸಿ.ಟಿ.ರವಿಗೆ ಬೆಳಗಾವಿ ಜಿಲ್ಲೆಯ ರೌಂಡ್ ಹೊಡಿಸಿದ ಪೊಲೀಸರು

ರಾತ್ರಿಯಿಡೀ ಸಿ.ಟಿ.ರವಿಗೆ ಬೆಳಗಾವಿ ಜಿಲ್ಲೆಯ ರೌಂಡ್ ಹೊಡಿಸಿದ ಪೊಲೀಸರು

ಬೆಳಗಾವಿ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್  ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿರುವ ಆರೋಪದ ಮೇಲೆ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಮೇಲೆ ರಾತ್ರಿಯಿಡೀ ಸಿ.ಟಿ. ರವಿಯನ್ನು ಪೊಲೀಸರ ಕಾರ್ ನಲ್ಲಿ ರೌಂಡ್ ಹೊಡಿಸಿ ಈಗ ಮತ್ತೇ ಬೆಳಗಾವಿಗೆ ಕರೆ ತರುತ್ತಿದ್ದಾರೆ.
ವಿಧಾನ ಪರಿಷತ್ ಸದನದಲ್ಲಿಯೇ ಮಾಜಿ ಸಚಿವ ಸಿ.ಟಿ.ರವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಆಕೇಪಾರ್ಹ ಪದ ಬಳಕೆ‌ ಮಾಡಿರುವ ಹಿನ್ನೆಲೆಯಲ್ಲಿ ನಿನ್ನೆ ವಿಧಾನಸೌಧಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಿಂದ ಹೈಡ್ರಾಮವೇ ನಡೆದು ಹೋಗಿದೆ. ಸುವರ್ಣ ವಿಧಾನಸೌಧದ ಪಶ್ಚಿಮ ದ್ವಾರದಿಂದ ಸಿ.ಟಿ.ರವಿಯನ್ನು ಕರೆದೊಯ್ದ ಪೊಲೀಸರು ಹಿರೇಬಾಗೇವಾಡಿ ಇಲ್ಲಿಂದ ಖಾನಾಪುರ- ಕಿತ್ತೂರು- ಸವದತ್ತಿ- ರಾಮದುರ್ಗ ರಾತ್ರಿಯಿಡೀ ಪೊಲೀಸರು ಕಾರ್ ನಲ್ಲಿ ರೌಂಡ್ ಹೊಡೆಸಿದ್ದಾರೆ.
ಖಾನಾಪುರ ಪೊಲೀಸ್ ಠಾಣೆಯಿಂದ ಸಿ.ಟಿ.ರವಿಗೆ ಕರೆದೊಯ್ದುವಾಗ ಮಾತನಾಡಿದ ಅವರು, ನನಗೆ ಕೊಲೆ ಮಾಡುವ ಷಡ್ಯಂತ್ರ ಮಾಡಿದ್ದಾರೆ ಎಂದು ಹೇಳಿ ಪೊಲೀಸ್ ವಾಹನ ಹತ್ತುವಾಗ ತಲೆಗೆ ಪೆಟ್ಟಾಗಿ ರಕ್ತ ಸ್ರಾವವಾಗಿದೆ. ಕೂಡಲೇ ಪೊಲೀಸರು ಪ್ರಾಥಮಿಕ‌ ಚಿಕಿತ್ಸೆ ಕೊಡಿಸಿ ಬೆಂಗಳೂರಿನ ಜನಪ್ರತಿನಿದಿಗಳ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ತಿಳಿಸಿ ರಾತ್ರಿ ಎಲ್ಲ ಬೆಳಗಾವಿ ಜಿಲ್ಲೆಯನ್ನು ಪೊಲೀಸರು ತಮ್ಮ ವಾಹನದಲ್ಲಿ ರೌಂಡ್ ಹಾಕಿಸಿದ್ದಾರೆ.
ಪ್ರಧಾನಿ ನರೇಂದ್ರ ‌ಮೋದಿ ಅವರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನಿನ್ನೆ ಬೆಂಗಳೂರಿಗೆ ಬಂದು ಸಿ.ಟಿ.ರವಿ ಬಂಧನವಾಗಿರುವ ಹಿನ್ನೆಲೆಯಲ್ಲಿ ಬೆಳ್ಳಂ ಬೆಳಗ್ಗೆ ಬೆಳಗಾವಿಗೆ ದೌಡಾಯಿಸಿದ್ದಾರೆ.
ಸಿ.ಟಿ.ರವಿ ಬಂಧನ ಮಾಡಿರುವುದನ್ನು ಖಂಡಿಸಿ ಚಿಕ್ಕಮಗಳೂರುನಲ್ಲಿ ಬಂದ್ ಕರೆ ನೀಡಿದ್ದು, ಬೆಳಗಾವಿಯಲ್ಲಿಯೂ ಬಿಜೆಪಿ ಪ್ರತಿಭಟನೆ ನಡೆಸಲಿದೆ.

Total Views 184
RELATED ARTICLES

Most Popular

Recent Comments

KNN City News
Home
E-Paper