ಕನ್ನಡಮ್ಮ ಸುದ್ದಿ-ಕೊಪ್ಪಳ : ರಾಜ್ಯ ಮಾಧ್ಯಮ ಅಕಾಡಮಿಯು 2023 ಹಾಗೂ 2024ನೇ ಸಾಲಿನ ಜೀವಮಾನದ ಸಾಧನೆಯ ವಿಶೇಷ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿ ಹಾಗೂ ವಿವಿಧ ದತ್ತಿ ಪ್ರಶಸ್ತಿಗಳನ್ನು ಗುರುವಾರ ಪ್ರಕಟಿಸಿದೆ.
ಪತ್ರಿಕೋದ್ಯಮದ ಸೇವೆಯನ್ನು ಪರಿಗಣಿಸಿ ಜಿಲ್ಲೆಯ ಹೆಚ್.ಎಸ್.ಹರೀಶ್, ಸಿರಾಜ್ ಬಿಸರಳ್ಳಿ ಗೆ ವಾರ್ಷಿಕ ಪ್ರಶಸ್ತಿಗಳನ್ನು ಹಾಗೂ ಅಖಿಲ್ ಉಡೇವು ರಿಗೆ ದತ್ತಿ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ.
2023 ನೇ ಸಾಲಿನ ಪ್ರಶಸ್ತಿಗೆ ಸಿರಾಜ್ ಬಿಸರಳ್ಳಿ ಹಾಗೂ 2024 ನೇ ಸಾಲಿನ ಪ್ರಶಸ್ತಿಯನ್ನು ಹೆಚ್.ಎಸ್. ಹರೀಶ್ ರಿಗೆ ಘೋಷಣೆ ಮಾಡಲಾಗಿದೆ. ಪ್ರಜಾ ಸಂದೇಶ ದತ್ತಿ ಪ್ರಶಸ್ತಿ: ‘ಕೊಪ್ಪಳ ಜಿಲ್ಲೆಯಲ್ಲಿ ಬೇರೂರಿರುವ ಅಸ್ಪೃಶ್ಯತೆ’ ವರದಿಗಾಗಿ ಕೊಪ್ಪಳದ ವಾರ್ತಾಭಾರತಿ ವರದಿಗಾರ ಮುಹಮ್ಮದ್ ಅಖೀಲ್ ಉಡೇವು ಅವರನ್ನು ಆಯ್ಕೆ ಮಾಡಲಾಗಿದೆ.
2023ನೆ ಸಾಲಿನ ಜೀವಮಾನದ ಸಾಧನೆಯ ವಿಶೇಷ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಅ.ಚ.ಶಿವಣ್ಣ ಹಾಗೂ 2024ನೆ ಸಾಲಿನ ಜೀವಮಾನದ ಸಾಧನೆಯ ವಿಶೇಷ ಪ್ರಶಸ್ತಿಗೆ ʼವಾರ್ತಾಭಾರತಿʼ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆಯವರನ್ನು ಆಯ್ಕೆ ಮಾಡಲಾಗಿದೆ.
