ಕನ್ನಡಮ್ಮ ಸುದ್ದಿ-ಕೊಪ್ಪಳ : ತೆರೆಕಂಡಿದ್ದ ಸಿನಿಮಾ ‘ಸಂಜು ವೆಡ್ಸ್ ಗೀತಾ’, ನಾನು ಹಾಗೂ ರಮ್ಯಾ ಕಾಂಬಿನೇಶನ್ನಲ್ಲಿ ಮೂಡಿಬಂದಿದ್ದ ಈ ಸಿನಿಮಾ ರಾಜ್ಯದಲ್ಲಿ ದೊಡ್ಡ ಮಟ್ಟದ ಹಿಟ್ ಆಗಿತ್ತು. ಇದೀಗ 14 ವರ್ಷಗಳ ಬಳಿಕ ‘ಸಂಜು ವೆಡ್ಸ್ ಗೀತಾ-2’ ಚಿತ್ರವು ತೆರೆ ಮೇಲೆ ಬರಲಿದೆ ಎಂದು ನಟ ಶ್ರೀನಗರ ಕಿಟ್ಟಿ ಹೇಳಿದರು.
ಸಂಜು ವೆಡ್ಸ್ ಗೀತಾ 2 ಸಿನಿಮಾದ ಚಿತ್ರಗೀತೆ ಬಿಡುಗಡೆಗೆ ಕೊಪ್ಪಳಕ್ಕೆ ಆಗಮಿಸಿದ್ದ ಅವರು, ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ,
ರಾಜಕಾರಣದಲ್ಲಿ ನಟಿ ರಮ್ಯಾ ಬಿಜಿಯಾಗಿರುವ ಕಾರಣ, ರಚಿತಾ ರಾಮ್ ಜೋಡಿಯಾಗಿದ್ದಾರೆ. ಅಲ್ಲದೇ, ಸಂಜು ವಾಟ್ಸ್ ಗೀತಾ ಮೊದಲ ಭಾಗದಲ್ಲಿ ಪೂರ್ತಿ ಲವ್ಸ್ಟೋರಿಯಾಗಿತ್ತು. ಜನವರಿ 10ರಂದು ಸಿನಿಮಾ ರಾಜ್ಯದಲ್ಲಿ ಬಿಡುಗಡೆಯಾಗಲಿದೆ.ಶಿಡ್ಲಘಟ್ಟದಿಂದ ಆರಂಭವಾಗುವ ಕಥೆ ಸ್ವಿಜರ್ಲ್ಯಾಂಡ್ಗೆ ಹೋಗುತ್ತದೆ. ಇದು ಬೇರೆಯದೇ ಪ್ಯಾಟ್ರನ್ ಸಿನಿಮಾ, ಈ ಹಿಂದೆ ಎರಡು ಸಾಂಗ್ ಬಿಟ್ಟೆದ್ದೆವು. ಇದೀಗ, ಮತ್ತೊಂದು ಸಾಂಗ್ ಬಿಡುಗಡೆಗೊಳಿಸಿದ್ದೇವೆ. ಚಿತ್ರದ ‘ಮಳೆಯಂತೆ..’ ಹಾಡು ಬಿಡುಗಡೆಯಾಗಿದೆ. ಮಳೆಯಂತೆ ಹಾಡು ನೋಡಿದ ವೀಕ್ಷಕರು ಶುಭ ಹಾರೈಸಿದ್ದಾರೆ ಎಂದರು.
ಹಿರಿಯ ಸಾಹಿತಿ ಮಾಹಾಂತೇಶ ಮಲ್ಲನಗೌಡರ್ ಮಾತನಾಡಿ ಕನ್ನಡ ಚಿತ್ರರಂಗದ ಹೆಸರಾಂತ ನಟ ಶ್ರೀನಗರ ಕಿಟ್ಟಿ ರವರು ಕೊಪ್ಪಳ ನಗರಕ್ಕೆ ಬಂದು ಚಿತ್ರದ ಚಿತ್ರಗೀತೆ ಬಿಡುಗಡೆ ಮಾಡಿದ್ದು ಸಂತಸ ತಂದಿದೆ ಎಂದರು. ಈ ಸಂದರ್ಭದಲ್ಲಿ ಸಿನಿಮಾದ ನಿರ್ಮಾಪಕ ಚಲವಾದಿ ಕುಮಾರ್, ಮುಖಂಡರಾದ ಕನಕ ಮೂರ್ತಿ ಚಲವಾದಿ, ಕಾಶಪ್ಪ ಚಲವಾದಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
== ಕನ್ನಡ ಸಿನಿಮಾರಂಗದಲ್ಲಿ ಫಾನ್ಸ್ ವಾರ್ ಆಗಾಗ ಆಗುತ್ತಲೇ ಇರುತ್ತವೆ. ಸ್ಟಾರ್ ಗಳೇ ಯಾವುದೇ ಗಲಾಟೆ ಮಾಡಿಕೊಳ್ಳದೆ ಖುಷಿಯಾಗಿರುತ್ತಾರೆ ಆದರೆ ಕೆಲ ಅಭಿಮಾನಿಗಳು ಮಾತ್ರ ಇದು ಸರಿ ಅಲ್ಲ ಅದು ಸರಿ ಅಲ್ಲ ಕೊಂಕು ತೆಗೆಯುತ್ತಲೇ ಇರುತ್ತಾರೆ. ಅಭಿಮಾನಿಗಳು ಎಲ್ಲರ ಚಿತ್ರಗಳನ್ನ ನೋಡಬೇಕು ಫ್ಯಾನ್ಸ್ ವಾರ್ ಸರಿಯಲ್ಲ : ಶ್ರೀನಗರ ಕಿಟ್ಟಿ, ಚಿತ್ರ ನಟ
