Monday, November 23, 2026
HomeBelagaviಬಿಗ್ ಬ್ರೇಕಿಂಗ್: ಅಂತಾರಾಜ್ಯದಲ್ಲಿ ಹೆಣ್ಣು ಮಕ್ಕಳ ಮಾರಾಟ ಮಾಡ್ತಿದ್ದ ಗ್ಯಾಂಗ್ ಬಂಧನ

ಬಿಗ್ ಬ್ರೇಕಿಂಗ್: ಅಂತಾರಾಜ್ಯದಲ್ಲಿ ಹೆಣ್ಣು ಮಕ್ಕಳ ಮಾರಾಟ ಮಾಡ್ತಿದ್ದ ಗ್ಯಾಂಗ್ ಬಂಧನ

ಬೆಳಗಾವಿ
ಹೆಣ್ಣು ಮಗು ಅದೃಷ್ಟ ಕಣ್ಣು. ಹೆಣ್ಣು ಮಕ್ಕಳನ್ನು ಮಹಾರಾಷ್ಟ್ರದಿಂದ ಕದ್ದು ತಂದು ಮಾರಾಟ ಮಾಡುತ್ತಿದ್ದ ಕತರ್ನಾಕ್ ಬೆಳಕಿಗೆ ಬಂದಿದೆ.
ಗಡಿ ಜಿಲ್ಲೆಗಳನ್ನೇ ಹೆಣ್ಣು ಮಕ್ಕಳ ಮಾರಾಟ ಅಡ್ಡೆಯಾಗಿ ಮಾಡಿಕೊಂಡ ಕತರ್ನಾಕ್ ಗ್ಯಾಂಗ್ ನೆರೆಯ ಮಹಾಷ್ಟ್ರದಿಂದ ಹೆಣ್ಣು ಮಕ್ಕಳನ್ನ ತಂದು ಗೋವಾಕ್ಕೆ ಮಾರಾಟ ಮಾಡಲು ಬೆಳಗಾವಿ, ಉತ್ತರ ಕನ್ನಡ ಜಿಲ್ಲೆ ಅಡ್ಡೆ ಮಾಡಿಕೊಂಡಿದ್ದರು‌.
ಜಿಲ್ಲಾ ಹಾಗೂ ನಗರ ಪೊಲೀಸ್ ಇಲಾಖೆ ಎಷ್ಟೇ ಕ್ರಮ ಕೈಗೊಂಡಿದ್ದರೂ ಹೆಣ್ಣು ಮಕ್ಕಳ ಮರಾಟ ಮಾಡುವುದು ಮಾತ್ರ ನಿಲ್ಲುತ್ತಿರಲಿಲ್ಲ.
ಹಣದಾಸೆ, ಹೆಣ್ಣೆಂಬ ಕಾರಣಕ್ಕೆ ಇನ್ನೂ ನಿಲ್ತಲ್ಲ ಮಕ್ಕಳ ಮಾರಾಟ ಮಾಡುತ್ತಿರುವುದು ನಿಂತಿಲ್ಲ. ಒಂದು ವರ್ಷ ಹತ್ತು ತಿಂಗಳ ಹೆಣ್ಣು ಮಗು ಮಾರಾಟ ಬೆಳಕಿಗೆ ಬಂದಿದೆ. 4 ಲಕ್ಷ 50 ಸಾವಿರ ರೂಪಾಯಿಗೆ ಹೆಣ್ಣು ಮಗು ಮಾರಾಟ ಮಾಡಿದ್ದಾರೆ. ಮಾರಾಟ ಮಾಡಿದ ಹೆಣ್ಣು ಮಗು ರಕ್ಷಣೆ ಮಾಡಿದ ಬೆಳಗಾವಿ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು. ಮಹಾರಾಷ್ಟ್ರದ ಸಾಂಗಲಿ ಮೂಲದ ದಂಪತಿಯಿಂದ ಗೋವಾ ರಾಜ್ಯದ ಮಹಿಳೆಗೆ ಮಾರಾಟ ಮಾಡಿದ್ದಾಳೆ.
ಬೆಳಗಾವಿ ಮತ್ತು ಮಹಾರಾಷ್ಟ್ರ ಮಧ್ಯವರ್ತಿಗಳಿಂದ ಹೆಣ್ಣು ಮಗು ಮಾರಾಟ ದಂಧೆ ಜೊರಾಗಿ ನಡೆದಿತ್ತು. ಇದಕ್ಕೆ ಬೆಳಗಾವಿ ಜಿಲ್ಲಾ ಮಕ್ಕಳ ರಕ್ಷಣಾ ಸಹಾಯವಾಣಿಗೆ ಕರೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ಸಾಂಗ್ಲಿಯ‌ ಎ1 ಆರೋಪಿ ರಾಜೇಂದ್ರ ಮೇತ್ರಿ, ಎ2 ಆರೋಪಿ ಶಿಲ್ಪಾ ಮೇತ್ರಿ ದಂಪತಿಯಿಂದ ಹಣಕ್ಕಾಗಿ ಹೆತ್ತ ಮಗು ಮಾರಾಟ ಮಾಡಿದ್ದ. ಗೋವಾ ರಾಜ್ಯದ ಎ3 ಆರೋಪಿ ಸ್ಮಿತಾ ವಾಡೀಕರ ಹೆಣ್ಣು ಮಗು ಖರೀದಿಸಿದವಳು. ಬೆಳಗಾವಿ ನಗರದ ಎ4 ಆರೋಪಿ ವಂದನಾ ಸೂರವೆ, ಮಹಾರಾಷ್ಟ್ರ ಸೊಲ್ಲಾಪುರದ ಎ5 ಆರೋಪಿ ರವಿ ರಾವುತ, ಎ6 ಆರೋಪಿ ರಾಣಿ ರಾವುತ ದಂಪತಿಗಳು ಮಧ್ಯವರ್ತಿಗಳು. ಮೂರು ಜನ ಮಧ್ಯವರ್ತಿ ಆರೋಪಿಗಳೇ ಹೆಣ್ಣು ಮಗು ಮಾರಾಟ ದಂಧೆಯ ಕಿಂಗ್ ಪಿನ್.
ಮಗುವನ್ನ ಉತ್ತರ ಕನ್ನಡದ ರಾಮನಗರದ ಹೋಟೆಲ್ ಒಂದರಲ್ಲಿ ಮಾರಾಟ ಮಾಡಿದ್ದ ಆರೋಪಿಗಳು.
ಮಾಹಿತಿ ಬರ್ತಿದ್ದಂತೆ ಮಗು ಖರೀದಿ ಮಾಡಿದ್ದ ಮಹಿಳೆಗೆ ಸಂಪರ್ಕ. ಗೋವಾದ ಸ್ಮೀತಾಗೆ ಕರೆ ಮಾಡಿ ಬೆಳಗಾವಿಗೆ ಕರೆಸಿಕೊಂಡು ಮಗು ಪಡೆದ ಅಧಿಕಾರಿಗಳು. ಈ ವೇಳೆ ನಾಲ್ಕೂವರೆ ಲಕ್ಷ ಹಣ ಕೊಟ್ಟು ಖರೀದಿ ಮಾಡಿದ್ದಾಗಿ ಒಪ್ಪಿಕೊಂಡ ಸ್ಮಿತಾ. ಬಳಿಕ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಆರು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿ ಮಾರ್ಕೆಟ್ ಠಾಣೆ ಪೊಲೀಸರಿಂದ ತನಿಖೆ. ತಲೆ ಮರೆಸಿಕೊಂಡು ಆರೋಪಿ ವಂದನಾ, ರವಿ, ರಾಣಿ ಮಧ್ಯವರ್ತಿಗಳಿಗಾಗಿ ಶೋಧ ಕಾರ್ಯಚರಣೆ ನಡೆದಿದೆ.

Total Views 195
RELATED ARTICLES

Most Popular

Recent Comments

KNN City News
Home
E-Paper