Monday, November 23, 2026
HomeBelagaviಬಿಗ್ ಬ್ರೇಕಿಂಗ್: ಈಗ ಹೆಣ್ಣು ಮಗು ಎಲ್ಲಿದೆ ಗೊತ್ತಾ..?

ಬಿಗ್ ಬ್ರೇಕಿಂಗ್: ಈಗ ಹೆಣ್ಣು ಮಗು ಎಲ್ಲಿದೆ ಗೊತ್ತಾ..?

ಬೆಳಗಾವಿ
ಸ್ವಾಮಿ ವಿವೇಕಾನಂದ ದತ್ತು ಕೇಂದ್ರದಲ್ಲಿ ಹೆಣ್ಣು ಮಗು ಆರೈಕೆ ಮಾಡಲಾಗುತ್ತಿದೆ ಎಂದು ಬೆಳಗಾವಿ ಮಕ್ಕಳ ಸಹಾಯವಾಣಿ ಸಂಯೋಜಕ ಮಲ್ಲೇಶ್ ಕುಂದರಗಿ ಹೇಳಿದರು.
ಬುಧವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ನಾಲ್ಕೂವರೆ ಲಕ್ಷ ರೂಪಾಯಿ ಹಣಕ್ಕೆ ವ್ಯವಹಾರ ಆಗಿದೆ ಅಂತಾ ಹೇಳುತ್ತಿರತರಾರ. ರಾಮನಗರದಲ್ಲಿ ಮಗುವನ್ನು ಹಸ್ತಾಂತರ ಮಾಡಿದ್ದಾಗಿ ಬೆಳಕಿಗೆ ಬಂದಿದೆ. ಮಗು ತೆಗೆದುಕೊಂಡವರಿಗೆ ಸಂಪರ್ಕ ಮಾಡಿದ್ದೇವು. ಹಣ ಕೊಟ್ಟು ಮಗು ಖರೀದಿ ಮಾಡಿದ್ದಾಗಿ ಮಗು ಪಡೆದವರು ಹೇಳಿದ್ದಾರೆ. ಬೆಳಗಾವಿಯವರೇ ಮಗು ಮಾರಾಟದ ಮಧ್ಯವರ್ತಿಗಳು ಎಂದರು.
ಹೆಣ್ಣು ಮಗುವನ್ನು ಅಕ್ರಮವಾಗಿ ಮಕ್ಕಳನ್ನು ದತ್ತು ಪಡೆಯುವುದು ಕಾನೂನು ಬಾಹಿರವಾಗಿದೆ. ಈ ನಿಟ್ಟಿನಲ್ಲಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಮುಂದಿನ ಕ್ರಮವನ್ನ ಕಾನೂನು ಪ್ರಕಾರ ಪೊಲೀಸರು ತೆಗೆದುಕೊಳ್ತಾರೆ ಎಂದರು.
ಕಳೆದ ಡಿ. 17 ರಂದು ಮಗು ಬರುತ್ತೆ. ಅದು ಚೈಲ್ಡ್ ಆಫೀಸ್ ದಿಂದ ಬರುತ್ತೆ. ಇನ್ನೊಬ್ಬರಿಗೆ ಕೊಟ್ಟಿದ್ದರಂತೆ. ಒಂದು ವರ್ಷ ಹತ್ತು ತಿಂಗಳ ಮಗು ಇದೆ. ಕಾನೂನು ರೀತಿ ವ್ಯವಸ್ಥೆ ಮಾಡಿಕೊಳ್ಳಬೇಕು.
ಮಾರಾಟ ಆಗ್ತಿತ್ತು ಅಂತಾ ಸೂಚನೆ ಇದೆ. ಗೋವಾದಿಂದ ಕರೆದುಕೊಂಡು ಬಂದಿದ್ದಾರೆ. ಸ್ಮಿತಾ ವಾಡೇಕರ್ ಇವರಿಂದ ಮಗು ರೆಸ್ಕ್ಯೂ ಆಗಿದೆ. ಮಹಾರಾಷ್ಟ್ರ ಮೂಲದ ಮಗು ಇದಾಗಿದೆ. ಮುಂದಿನ ಆದೇಶದವರೆಗೆ ಮಗು ನಮ್ಮ ಬಳಿ ಇರುತ್ತೆ.
ದತ್ತು ಪ್ರಕ್ರಿಯೆ ಆದಾಗ ನಮ್ಮಲ್ಲಿ ಇರುತ್ತೆ ಎಂದರು.

Total Views 209
RELATED ARTICLES

Most Popular

Recent Comments

KNN City News
Home
E-Paper