Monday, November 23, 2026
HomeBelagaviBreking News: ಮದುವೆಯಾಗದ ಯುವಕರೆ ಹುಷಾರ್...

Breking News: ಮದುವೆಯಾಗದ ಯುವಕರೆ ಹುಷಾರ್…

 


ಬೆಳಗಾವಿ
ಮದುವೆಯಾದ ಯುವಕರನ್ನು ಗುರಿಯಾಸಿಕೊಂಡು ಮದುವೆ ಮಾಡುವುದಾಗಿ ಹೇಳಿ ಲಕ್ಷಾಂತರ ರೂ. ಹಣ ಚಿನ್ನಭರಣ ದೋಚಿಕೊಂಡು ಪರಾರಿಯಾದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿಯಲ್ಲಿ‌ ನಡೆದಿದೆ.
ಮದುವೆಯಾಗದ ಯುವಕ, ಯುತಿಯರಿಗೆ ನಾವು ಮದುವೆ ಮಾಡಿ ಕೊಡುತ್ತೇವೆ‌‌. ಮೂರು ಲಕ್ಷ ರೂಪಾಯಿ ಕೊಡಿ ಇವತ್ತೆ ಮದುವೆ ಮಾಡುತ್ತೇವೆ ಎಂದು ನಕಲಿ ಮದುವೆ ಕಳ್ಳರ ಗ್ಯಾಂಗ್‌ವೊಂದು ತಗ್ಲಾಕೊಂಡಿದೆ.
ಪಕ್ಕದ ಮಹಾರಾಷ್ಟ್ರ ರಾಜ್ಯದಿಂದ ಬಂದಿರುವ ಗ್ಯಾಂಗ್ ಎನ್ನಲಾಗುತ್ತಿದೆ. ಕರ್ನಾಟಕದ ಕೆಲ ಜನರನ್ನು ಸಂಪರ್ಕಿಸಿ ಮದುವೆ ಆಗದೇ ಇರುವವರನ್ನೆ ಟಾರ್ಗೆಟ್ ಮಾಡುವ ಗ್ಯಾಂಗ್, ಮದುವೆ ಮಾಡಿಸಿ ಕೊಡ್ತೇವೆ ಅಂತಾ ಹೇಳಿ ಹಣ ಪಿಕೋ ಗ್ಯಾಂಗ್ ಈಗ ಜಿಲ್ಲೆಯಲ್ಲಿ ಸಕ್ರಿಯವಾಗಿದೆ.
3 ಲಕ್ಷ ಹಣ ಪಡೆದು ರಾತ್ರೋ ರಾತ್ರಿ ಮನೆಯಲ್ಲಿರುವ ಬೆಳ್ಳಿ, ಬಂಗಾರ ಬಟ್ಟೆ ತಗೊಂಡು ಎಸ್ಕೇಪ್ ಆಗಿದ್ದ ಗ್ಯಾಂಗ್ ಕಂಕಣವಾಡಿ ಗ್ರಾಮಸ್ಥರ ಕೈಗೆ ತಗ್ಲಾಕ್ಕೊಂಡಿದೆ.
ಇತ್ತೀಚೆಗಷ್ಟೇ ಅಥಣಿ, ರಾಯಬಾಗ, ಹುಕ್ಕೇರಿ ಹಾಗೂ ಮಹಾರಾಷ್ಟ್ರ ಕರ್ನಾಟಕದ ಗಡಿ ಗ್ರಾಮಗಳಲ್ಲಿ ವಂಚನೆ ಬೆಳಕಿಗೆ ಬಂದಿತ್ತು.
ವಂಚನೆ ಮಾಡುತ್ತಿದ್ದ ಗ್ಯಾಂಗ್ ನ್ನು ರಾಯಬಾಗ ಪೊಲೀಸ್‌ರಿಗೆ ಒಪ್ಪಿಸಿದ್ದಾರೆ. ವಂಚನೆಗೆ ಒಳಗಾದವನು ಕೇಸ್ ದಾಖಲಿಸಲು ಹಿಂದೇಟು ಹಾಕುತ್ತಿದ್ದು, ಹೀಗಾಗಿ ಕೇಸ್ ದಾಖಲಿಸದೇ ಪೊಲೀಸರು ವಂಚನೆ‌ ಮಾಡಿದ ಗ್ಯಾಂಗ್ ಅನ್ನು ಬಿಟ್ಟು ಕಳುಹಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ನಡೆದಿದೆ.

Total Views 402
RELATED ARTICLES

Most Popular

Recent Comments

KNN City News
Home
E-Paper