Monday, November 23, 2026
HomeKoppalನಗರದ ಹಸಿರೀಕರಣಕ್ಕಾಗಿ ಪ್ರಾಧಿಕಾರದಿಂದ ಸಸಿ ನೆಡೆಯುವ ಕಾರ್ಯಕ್ರಮ

ನಗರದ ಹಸಿರೀಕರಣಕ್ಕಾಗಿ ಪ್ರಾಧಿಕಾರದಿಂದ ಸಸಿ ನೆಡೆಯುವ ಕಾರ್ಯಕ್ರಮ

ಕನ್ನಡಮ್ಮ ಸುದ್ದಿ-ಕೊಪ್ಪಳ : ನಗರದ ಹಸಿರೀಕರಣಕ್ಕಾಗಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲಿ ಫಾಕ್ಸ್ಟೇಲ್ ಪಾಮ್ ಗಿಡಗಳನ್ನು ಜಿಲ್ಲಾಡಳಿ ಭವನದಿಂದ ಗದಗ ರಸ್ತೆಯ ಮಳೆ ಮಲ್ಲೇಶ್ವರ ದೇವಸ್ಥಾನದವರೆಗೆ ಹಾಗೂ ಗವಿಮಠ ರಸ್ತೆಯ ಮಧ್ಯದಲ್ಲಿರುವ ಡಿವೈಡರ್‌ನಲ್ಲಿ ಅಲಂಕಾರಿಕ ಸಸಿಗಳನ್ನು ನಡೆಸಲಾಯಿತು.

ನಗರಾಭಿವೃದ್ಧಿ ಪ್ರಾಧಿಕಾರವು ಹಮ್ಮಿಕೊಂಡಿದ್ದ ಸಸಿ ಹಚ್ಚುವ ಕಾರ್ಯಕ್ರಮಕ್ಕೆ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿಜಿ, ಸಂಸದ ಕೆ.ರಾಜಶೇಖರ ಹಿಟ್ನಾಳ ಅವರು ಶುಕ್ರವಾರ ಜಿಲ್ಲಾಡಳಿತ ಭವನದ ಕಛೇರಿ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿ.ಪಂ. ಸಿಇಒ ರಾಹುಲ್ ರತ್ನಂ ಪಾಂಡೇಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ದಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಯೋಗಾನಂದ ಸೇರಿದಂತೆ ವಿವಿಧ ಇಲಾಖೆಗಳ ಇತರೆ ಅಧಿಕಾರಿಗಳು ಇದ್ದರು.

Total Views 17
RELATED ARTICLES

Most Popular

Recent Comments

KNN City News
Home
E-Paper