Monday, November 23, 2026
HomeBelagaviಬಾರ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ: ವ್ಯಕ್ತಿಯೋರ್ವನ ಸಾವು

ಬಾರ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ: ವ್ಯಕ್ತಿಯೋರ್ವನ ಸಾವು

ಬೆಳಗಾವಿ
ವಿಪರೀತ ಮದ್ಯ ಸೇವನೆ ಮಾಡಿದ್ದ ವ್ಯಕ್ತಿಯನ್ನು ಕ್ಷುಲ್ಲಕ ಕಾರಣಕ್ಕೆ ಥಳಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮೂಡಲಗಿಯಲ್ಲಿ ನಡೆದಿದೆ.
ಮೂಡಲಗಿಯ ಬಾರ್ ಒಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಲಕ್ಷ್ಮಣ ಮರನೂರ(45) ಕೊಲೆಯಾಗಿದ್ದಾನೆ.ಬರಂಗಪ್ಪ ಪಾಟೀಲ್, ಈರಪ್ಪ ತುಂಗಳ ಕೊಲೆ ಮಾಡಿದ ಆರೋಪಿಗಳು ಎಂದು ಗುರುತಿಸಲಾಗಿದೆ.
ನಿನ್ನೆ ಮಧ್ಯಾಹ್ನ ಬಾರಿಗೆ ಬಂದು ಮದ್ಯಪಾನ ಮಾಡುತ್ತಿದ್ದ ಲಕ್ಷ್ಮಣ
ಲಕ್ಷ್ಮಣ ಕುಳಿತಿದ್ದ ಟೇಬಲ್ ಪಕ್ಕದಲ್ಲಿಯೇ ಕುಳಿತಿದ್ದ ಇಬ್ಬರು ಆರೋಪಿಗಳ ನಡುವೆ ಕ್ಷುಲ್ಲಕ ವಿಚಾರಕ್ಕೆ ಮೂವರ ಮಧ್ಯೆ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದು ಲಕ್ಷ್ಮಣ್ ಮೇಲೆ ಹಲ್ಲೆ ಮಾಡಿದ್ದ ರಂಗಪ್ಪ, ಈರಪ್ಪನ ಹಲ್ಲೆಯಿಂದ ಸ್ಥಳದಲ್ಲಿಯೇ ಪ್ರಾಣ ಬಿಟ್ಟ ಲಕ್ಷ್ಮಣ್ ಕೂಡಲೇ ಬಾರ್ ನಿಂದ ಶವ ಹೊರ ತಂದು ಬಿಸಾಡಿದ್ದರು.
ಸಹಜ ಸಾವೆಂದು ಬಿಂಬಿಸಲು ಮುಂದಾಗಿದ್ದ ಇಬ್ಬರೂ ಕೀಚಕರು ಮುಂದಾಗಿ ಲಕ್ಷ್ಮಣ್ ಮೇಲೆ ಹಲ್ಲೆ ಮಾಡುವ ವಿಡಿಯೋ ಸ್ಥಳೀಯರೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದೆ‌‌
ಪೊಲೀಸರ ವಿಚಾರಣೆಯಲ್ಲಿ ಗಲಾಟೆಯಾದ ಕುರಿತು ಮಾಹಿತಿ ಸಂಗ್ರಹಿಸಿ ಕೂಡಲೆ ಇಬ್ಬರನ್ನು ಪತ್ತೆ ಹಚ್ಚಿ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌‌.

Total Views 240
RELATED ARTICLES

Most Popular

Recent Comments

KNN City News
Home
E-Paper