Monday, November 23, 2026
HomeBelagaviಆಸ್ಪತ್ರೆಯ ಮುಂದೆ ಸಚಿವೆ ಲಕ್ಷ್ಮೀ ಸಹಾಯ ನೆನೆದು ಕಣ್ಣೀರು ಹಾಕಿದ ಮಹಿಳೆ ಯಾರು ?

ಆಸ್ಪತ್ರೆಯ ಮುಂದೆ ಸಚಿವೆ ಲಕ್ಷ್ಮೀ ಸಹಾಯ ನೆನೆದು ಕಣ್ಣೀರು ಹಾಕಿದ ಮಹಿಳೆ ಯಾರು ?

ಬೆಳಗಾವಿ
ಬೆಂಗಳೂರಿನಲ್ಲಿ ಮೌನ್ನೆ ನಡೆದ ಸಿಎಲ್ ಪಿ ಸಭೆ ಮುಗಿಸಿಕೊಂಡು ಬೆಳಗಾವಿಗೆ ಬರುತ್ತಿರುವಾಗ ನಿನ್ನೆ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ಕಾರ್ ಅಪಘಾತದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆರೋಗ್ಯ ವಿಚಾರಿಸಲು ಮಹಿಳೆಯೋರ್ವಳು ಆಸ್ಪತ್ರೆಯ ಮುಂದೆ ಕಣ್ಣೀರು ಹಾಕಿದ ಘಟನೆ ಬುಧವಾರ ನಡೆದಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಲಕ್ಷ್ಮೀ ಹೆಬ್ಬಾಳಕರ್ ಮಾಡಿರುವ ಸಹಾಯ ನೆನೆದು ಕಣ್ಣೀರು ಹಾಕಿದ್ದಾರೆ. ಗಣೇಶಪುರದ ನಿವಾಸಿ ಸರಿತಾ ಲಾಠೆ ಲಕ್ಷ್ಮೀ ಪುತ್ರ ಮೃಣಾಲ್‌ ಮುಂದೆ ನಿಂತು ಕಣ್ಣೀರು ಹಾಕಿದ್ದಾರೆ.
ನಮ್ಮ ಗ್ರಾಮದಲ್ಲಿ ಮನೆ, ಶೌಚಾಲಯ, ರಸ್ತೆ, ದೇವಸ್ಥಾನ, ಗೃಹಲಕ್ಷ್ಮಿ ಪೇನ್ಷನ್ ಎಲ್ಲವೂ ಮಾಡಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳಕರ್ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥನೆ ಮಾಡುವೆ ಎಂದ ಸರಿತಾ ಲಾಠೆ ಕಣ್ಣೀರು ಹಾಕಿದರು.

Total Views 128
RELATED ARTICLES

Most Popular

Recent Comments

KNN City News
Home
E-Paper