Monday, November 23, 2026
HomeBelagaviರೈತನ ಖಾತೆಗೆ ಕನ್ನ ಹಾಕಿದ ಸೈಬರ್ ವಂಚಕರು

ರೈತನ ಖಾತೆಗೆ ಕನ್ನ ಹಾಕಿದ ಸೈಬರ್ ವಂಚಕರು

ಚಿಕ್ಕೋಡಿ
ರೈತನೋರ್ವ ತನ್ನ ಮಗಳ ಮದುವೆಗೆ ಸಾಲ ಮಾಡಿದ್ದನ್ನು ಮರುಪಾವತಿಸಲು ಬ್ಯಾಂಕ್ ನಲ್ಲಿಟ್ಟ ಹಣವನ್ನು ಸೈಬರ್ ವಂಚಕರು ಲಕ್ಷಾಂತರ ರೂ. ಕನ್ನ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಚಿಕ್ಕೋಡಿ ತಾಲೂಕಿನ ಹಂಚಿನಾಳ ಗ್ರಾಮದ ಕುಮಾರ ಬಡಿಗೇರ ಎಂಬ ರೈತನಿಗೆ ನಿಮ್ಮ ಬ್ಯಾಂಕ್ ಖಾತೆಯ ಕೆವೈಸಿ ಮಾಡಿಸಬೇಕು ಎಂದು ಕುಮಾರನ ಮೊಬೈಲ್ ಗೆ ಒಟಿಪಿ ಕಳುಹಿಸಿ ಸುಮಾರು ಒಂದೂವರೆ ಲಕ್ಷ ರೂ. ಕನ್ನ ಹಾಕಿದ್ದಾರೆ.
ನಿಮ್ಮ ಖಾತೆಗೆ ಕೆವೈಸಿ ಮಾಡಿಸಬೇಕು. ಇಲ್ಲದಿದ್ದರೆ ನಿಮ್ಮ ಖಾತೆಯನ್ನು ಬಂದ್ ಮಾಡಲಾಗುವುದು ಎಂದು ಅನಾಮಧೇಯ ವ್ಯಕ್ತಿ ರೈತ ಕುಮಾರಗೆ ಕರೆ ಮಾಡಿ ಮೊಬೈಲ್ ಒಟಿಪಿ ಪಡೆದು ಕೆನರಾ ಬ್ಯಾಂಕ್ ನಲ್ಲಿದ್ದ ಒಂದೂವರೆ ಲಕ್ಷ ರೂ. ಪಂಗನಾಮ ಹಾಕಿದ್ದಾರೆ. ಈ ಕುರಿತು ಕುಮಾರ ಬ್ಯಾಂಕ್ ಗೆ ಹೋಗಿ ವಿಚಾರಿಸಿದ್ದಾಗ ಒಟಿಪಿ ಹೇಳಿ ತಪ್ಪು ಮಾಡಿದ್ದು ನೀವು ಈಹ ಹಣ ಮರುಳಿ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಕೂಡಲೇ ಕುಮಾರ ಸೈಬರ್ ಕ್ರೈಮ್ ವಿಭಾಗದ 1930ಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ.

 

Total Views 144
RELATED ARTICLES

Most Popular

Recent Comments

KNN City News
Home
E-Paper