Monday, November 23, 2026
HomeKoppalಮಾರ್ಚ್‌ನಲ್ಲಿ ಕನಕಗಿರಿ ಉತ್ಸವ: ಸಚಿವ ಶಿವರಾಜ ತಂಗಡಗಿ

ಮಾರ್ಚ್‌ನಲ್ಲಿ ಕನಕಗಿರಿ ಉತ್ಸವ: ಸಚಿವ ಶಿವರಾಜ ತಂಗಡಗಿ

ಕನ್ನಡಮ್ಮ ಸುದ್ದಿ-ಕನಕಗಿರಿ: ಕನಕಗಿರಿ ಉತ್ಸವ ನನ್ನ ಅಧಿಕಾರದ ಅವಧಿಯಲ್ಲಿ ಆರಂಭವಾಗಿದ್ದು, ಈಗಾಗಲೆ ನಾಲ್ಕು ಸಲ ಆಚರಣೆ ಮಾಡಲಾಗಿದೆ. ಈ ಸಲ ಉತ್ಸವಕ್ಕೆ ಹೊಸತನ ತರಲು ಜಾತ್ರೆಯ ಸಮಯದಲ್ಲಿ ಆಚರಿಸಲು ಯೋಜಿಸಲಾಗಿದೆ,. ಮಾ.20ರಂದು ಉತ್ಸವಕ್ಕೆ ಚಾಲನೆ ನೀಡಿ ಮಾ.21ರಂದು ಕನಕಾಚಲಪತಿ ರಥೋತ್ಸವದಂದು ಸಮಾರೋಪ ಸಮಾರಂಭ ನಡೆಸಲು ಚಿಂತನೆ ನಡೆಸಲಾಗಿದೆ

ರಥೋತ್ಸವದ ಮುಂಚೆ ಆಚರಣೆಬೇಕು ಎಂದು ಬಯಸಿದರೆ ಮಾ.17 ಹಾಗೂ 18 ರಂದು ನಡೆಸಲಾಗುವುದು, ಸ್ಥಳೀಯರ ಜತೆಗೆ ಚರ್ಚಿಸಿ ಅಂತಿಮ ದಿನ ಪ್ರಕಟಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ. ನೂತನ ತಾಲ್ಲೂಕು ಕೇಂದ್ರದ ತಹಶೀಲ್ದಾರ್ ಕಚೇರಿಯ ಸರ್ವೆ ಹಾಗೂ ನೋಂದಣಿ ಇಲಾಖೆಗಳ ಪ್ರತಿಯೊಂದು ಭೂದಾಖಲೆಗಳಿಗೆ ಡಿಜಿಟಲೀಕರಣ ಮಾಡುವುದರಿಂದ ಜನಪರ ಆಡಳಿತ ನೀಡಲು ಸಾಧ್ಯವಾಗಿದೆ , ದಾಖಲೆಗಳನ್ನು ಡಿಜಿಟಲೀಕರಣ ಮಾಡುವುದರಿಂದ ಹಳೆಯ ದಾಖಲೆಗಳು ಕಳ್ಳತನವಾಗುವುದು ಹಾಗೂ ತಿದ್ದಲು ಅಸಾಧ್ಯವಾಗುತ್ತದೆ ಎಂದು ಹೇಳಿದರು. ತಹಶೀಲ್ದಾರ್ ಕಚೇರಿಯಲ್ಲಿ ಉತ್ಸವದ ಕುರಿತು ನಡೆದ ಔಪಚಾರಿಕ ಮಾತುಕತೆಯಲ್ಲಿ ಮಾ.20 ಹಾಗೂ 21ರಂದು ನಡೆಸಲು ಸಲಹೆ‌ ನೀಡಿದರು. ಅಂತಿಮವಾಗಿ ಇದೇ ದಿನ ಉತ್ಸವ ನಡೆಯುವ ಸಾಧ್ಯತೆ ಇದೆ.

Total Views 11
RELATED ARTICLES

Most Popular

Recent Comments

KNN City News
Home
E-Paper