ಜ.25 ರಾಷ್ಟ್ರೀಯ ಮತದಾರರ ದಿನಾಚರಣೆ || ಬೂತ್ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಸ್ವೀಪ್ ಕಾರ್ಯಕ್ರಮ|| ಬೂತ್ ಮಟ್ಟದ ಅಧಿಕಾರಿಗಳಿಂದ ಮತದಾನ ಪ್ರತಿಜ್ಞಾ ವಿಧಿ ಬೋಧನೆ|| 2025ರ ರಾಷ್ಟ್ರೀಯ ಮತದಾರರ ಧ್ಯೇಯ-“ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ”||
ಕನ್ನಡಮ್ಮ ಸುದ್ದಿ–ಕೊಪ್ಪಳ:- ಮತದಾರರ ಪಟ್ಟಿಗಳ ನಿಖರತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಚುನಾವಣಾ ಆಯೋಗವು ಪ್ರತಿ ಬೂತ್ ಗಳಿಗೆ ಒಬ್ಬರಂತೆ ಬೂತ್ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಿದೆ. ಇದರಿಂದ ಗ್ರಾಮಗಳಲ್ಲಿ ಹೊಸದಾಗಿ ಯುವ ಮತದಾರರ ನೊಂದಣಿ, ತಿದ್ದುಪಡಿ, ಹೆಸರು ರದ್ದತಿ ಸೇರಿದಂತೆ ಹಲವು ರೀತಿಯ ಕೆಲಸಗಳನ್ನು ಈ ಬೂತ್ ಮಟ್ಟದ ಅಧಿಕಾರಿಗಳು ನಿಭಾಯಿಸಲಿದ್ದಾರೆ. ಇದರಿಂದ ಚುನಾವಣೆ ಆಯೋಗಕ್ಕೂ ಹಾಗೂ ಜನರ ನಡುವೆ ಇವರು ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲು ಅನುಕೂಲವಾಗಿದೆ.
ಕೊಪ್ಪಳ ವಿಧಾನಸಭಾ ಕ್ಷೇತ್ರದ ಮಾಹಿತಿ: ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 289 ಬೂತ್ ಗಳಿವೆ ಇದರಲ್ಲಿ 84 ನಗರ ಪ್ರದೇಶದಲ್ಲಿದ್ದು,205 ಗ್ರಾಮೀಣ ಭಾಗದಲ್ಲಿವೆ. ಈ ಎಲ್ಲಾ ಬೂತ್ ಗಳಲ್ಲಿ ಚುನಾವಣಾ ಆಯೋಗ ಬಿಎಲ್ಓ ಗಳನ್ನು ನೇಮಕ ಮಾಡಿ ಕಾಲಕಾಲಕ್ಕೆ ಮತದಾರರ ಪಟ್ಟಿ ಪರಿಷ್ಕರಣೆಗೆ ಹೆಚ್ಚಿನ ಒತ್ತು ನೀಡಿದೆ. ಇದರಿಂದ ಹೊಸ ಮತದಾರರ ಸೇರ್ಪಡೆ, ತಿದ್ದುಪಡಿ, ಹೆಸರು ರದ್ದುಪಡಿಸುವದು ಸೇರಿದಂತೆ ಜಾಗೃತಿ ಮೂಡಿಸುವ ಕೆಲಸವನ್ನು ಇವರು ನಿಭಾಯಿಸುತ್ತಿದ್ದಾರೆ.
ಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಘಟ್ಟರಡ್ಡಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಹಮ್ಮದ ರಫಿ ಮುಲ್ಲಾ ರವರು ಕಳೆದ 02 ವರ್ಷದಿಂದ ಬೂತ್ ಮಟ್ಟದ ಅಧಿಕಾರಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಲ ಕಾಲಕ್ಕೆ ಸರ್ಕಾರದ ಆದೇಶಗಳನ್ನು ಪಾಲನೆ ಮಾಡುವ ಮೂಲಕ 871 ಮತದಾರರ ಹೆಸರುಗಳನ್ನು ಸೇರ್ಪಡೆ ಮಾಡಿರುವ ಇವರು ಎಲ್ಲಾ ಮತದಾರರ ಕಾರ್ಡ್ ಗೆ ಆಧಾರ ಜೋಡಣೆ ಶೇ.97.10%ರಷ್ಟು ಮಾಡಿಸಿದ್ದಾರೆ. ಒಟ್ಟಾರೆ ಪ್ರತಿ ಮನೆ-ಮನೆಗೂ ತೆರಳಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಹೊಸ ಮತದಾರರನ್ನು ಗುರುತಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಒಟ್ಟಾರೆ ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಬೂತ್ ಮಟ್ಟದ ಅಧಿಕಾರಿಗಳು ಚುನಾವಣಾ ಆಯೋಗದ ಪ್ರಮುಖ ಆಧಾರ ಸ್ತಂಭಗಳಾಗಿದ್ದಾರೆ.
ವಿವರ ಸಂಖ್ಯೆ : ಭಾಗ ಸಂ:27, ಒಟ್ಟು ಮತದಾರರು: 897(ಪುರುಷ-435,ಮಹಿಳೆ-468), 2024ರಲ್ಲಿ ನೊಂದಣಿಯಾದ ಯುವ ಮತದಾರರು: 25(ಪುರುಷ-19,ಮಹಿಳೆ-06), ರದ್ದುಪಡಿಸಲಾದ ಒಟ್ಟು ಮತದಾರರು: 47 (ಪುರುಷ-38,ಮಹಿಳೆ-09), ತಿದ್ದುಪಡಿಯಾದ ಒಟ್ಟು ಮತದಾರರು: 64(ಪುರುಷ-52,ಮಹಿಳೆ-12), ಆಧಾರ್ ಜೊಡಣೆಯಾದ ಒಟ್ಟು ಮತದಾರರು: 871 ಶೇ.97.10%, ದಿನಾಂಕ:25-01-2025ರಂದು ಜರುಗುವ ರಾಷ್ಟ್ರೀಯ ಮತದಾರರ ದಿನಾಚರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮವು ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಜರುಗಲಿದ್ದು ಜಿಲ್ಲಾ ಚುನಾವಣಾಧಿಕಾರಿಗಳಿಂದ ಅಭಿನಂದನಾ ಪತ್ರವನ್ನು ಸ್ವೀಕರಿಸಲಿದ್ದಾರೆ.
ಘಟ್ಟರಡ್ಡಿಹಾಳ ಚಿಕ್ಕ ಗ್ರಾಮವಾಗಿದ್ದು ಮತದಾರರ ಪಟ್ಟಿಯ ಕುರಿತು ಬೂತ್ ಮಟ್ಟದ ಅಧಿಕಾರಿಯಾಗಿ ನಿಯೋಜಿಸಿದ ಮೇಲೆ ಪ್ರತಿ ಮನೆಗೆ ಭೇಟಿ ನೀಡಿ 18 ವರ್ಷ ತುಂಬಿದ ಕುಟುಂಬ ಸದಸ್ಯರ ಹೆಸರು ಇರುವ ಬಗ್ಗೆ&ಇಲ್ಲದಿರುವ ಬಗ್ಗೆ ಮಾಹಿತಿ ಪಡೆದು ಹೆಸರು ಇಲ್ಲದ ಸದಸ್ಯರ ಅಗತ್ಯ ದಾಖಲಾತಿ ಪಡೆದು ಸ್ಥಳದಲ್ಲಿಯೇ ಸ್ವೀಕೃತಿ ನೀಡಲಾಯಿತು. ಬಿಎಲ್ಒ ಕೆಲಸ ನನಗೆ ತೃಪ್ತಿ ತಂದಿದೆ. : *ಮಹಮ್ಮದ ರಫೀ, ಬಿಎಲ್ಒ ಹಾಗು ಶಿಕ್ಷಕರು ಸ.ಹಿ.ಪ್ರಾ.ಶಾಲೆ ಘಟ್ಟರಡ್ಡಿಹಾಳ ಗ್ರಾಮ, ಹಟ್ಟಿ ಗ್ರಾಮ ಪಂಚಾಯತ* ==
ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯಕ್ರಮವು ತಾಲೂಕಿನಾದ್ಯಂತ ಪರಿಣಾಮಕಾರಿಯಾಗಿ ಜರುಗಿರುವುದರಿಂದ 18 ವರ್ಷ ತುಂಬಿದ ಯುವಕರು, ಯುವತಿಯರು ತಮ್ಮ ಅಗತ್ಯವಾದ ದಾಖಲಾತಿಗಳನ್ನು ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಂಡಿದ್ದಾರೆ. ಈ ಬಾರಿಯೂ ಸ್ವೀಪ್ ಕಾರ್ಯಕ್ರಮವನ್ನು ಜರುಗಿಸಿ ಅರಿವು ಮೂಡಿಸಲಾಗಿದೆ. ದುಂಡಪ್ಪ ತುರಾದಿ, *ವಿಶೇಷ ಸಹಾಯಕ ಮತದಾರರ ನೋಂದಣಾಧಿಕಾರಿ , ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ಕೊಪ್ಪಳ* ==
