ಕನ್ನಡಮ್ಮ ಸುದ್ದಿ-ಕೊಪ್ಪಳ: ಕಾಂಗ್ರೆಸ್ ಪಕ್ಷದ ಸಂಸದರು ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ, ಕೇಂದ್ರದ ಬಜೆಟ್ ನಲ್ಲಿ ಕರ್ನಾಟಕಕ್ಕೆ ಯಾವುದೇ ವಿಶೇಷ ಅನುದಾನವಾಗಲಿ, ಕೊಡುಗೆಗಳಾಗಲಿ ಇಲ್ಲದೇ ಇರುವುದನ್ನು ಗಮನಕ್ಕೆ ತಂದು, ಈ ಹಿಂದೆ ರಾಜ್ಯಕ್ಕೆ ನಿಗದಿಯಾದ ನಬಾರ್ಡ್ ರೀ ಫೈನಾನ್ಸ್ ಅನ್ನು ಕಡಿಮೆಗೊಳಿಸಿದ ಬಗ್ಗೆ ಹಾಗೂ ಎಲ್ಐಸಿ ಪ್ರತಿನಿಧಿಗಳ ಬೇಡಿಕೆಯ ಬಗ್ಗೆ ಅವರ ಗಮನ ಸೆಳೆದಿದ್ದಾರೆ. ಹಾಗೂ ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿಸುವ ಬಗ್ಗೆ ವಿಶೇಷ ಕಾಳಜಿ ವಹಿಸಲು ಕೋರಿದ್ದಾರೆ.
ಈ ಸಂದರ್ಭದಲ್ಲಿ ಸಂಸದರಾದ ಜಿ. ಕುಮಾರ ನಾಯಕ, ರಾಜಶೇಖರ್ ಹಿಟ್ನಾಳ್, ಸಾಗರ್ ಖಂಡ್ರೆ, ಶ್ರೇಯಸ್ ಪಟೇಲ್, ಸುನೀಲ್ ಬೋಸ್, ಡಾ. ಪ್ರಭಾ ಮಲ್ಲಿಕಾರ್ಜುನ್ ಹಾಗೂ ಪ್ರಿಯಾಂಕಾ ಜಾರಕಿಹೊಳಿ ಇದ್ದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ ರಾಜ್ಯದ ಕಾಂಗ್ರೆಸ್ ಸಂದರು
Total Views 15
