Thursday, November 19, 2026
HomeBelagaviಹಿಂದುಳಿದ ಆಯೋಗದ, ಸದಸ್ಯರು, ಅಧ್ಯಕ್ಷರನ್ನು ಮಾಡಿದ್ದು ಕುಮಾರಸ್ವಾಮಿ, ಬಿಎಸ್ ವೈ, ಬೊಮ್ಮಾಯಿ: ಸಚಿವೆ ಲಕ್ಷ್ಮೀ

ಹಿಂದುಳಿದ ಆಯೋಗದ, ಸದಸ್ಯರು, ಅಧ್ಯಕ್ಷರನ್ನು ಮಾಡಿದ್ದು ಕುಮಾರಸ್ವಾಮಿ, ಬಿಎಸ್ ವೈ, ಬೊಮ್ಮಾಯಿ: ಸಚಿವೆ ಲಕ್ಷ್ಮೀ

ಬೆಳಗಾವಿ
ಹಿಂದುಳಿದ ಆಯೋಗದ ಅಧ್ಯಕ್ಷ, ಸದಸ್ಯ ನೇಮಕ ಮಾಡಿದ್ದು ಕುಮಾರಸ್ವಾಮಿ, ಯಡಿಯೂರಪ್ಪ, ಬೊಮ್ಮಾಯಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಭಾನುವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಹಿಂದುಳಿದ ಸದಸ್ಯರನ್ನು ನೇಮಕ ಮಾಡಿದ್ದು ಬಿಜೆಪಿ ಸರಕಾರ. ಜಾತಿ ಗಣತಿಯನ್ನು ಅಧ್ಯಯನ ಮಾಡಿದ್ದು ಬಿಜೆಪಿಯ ಬೊಮ್ಮಾಯಿ, ಯಡಿಯೂರಪ್ಪ ವರದಿ ತಿರಸ್ಕಾರ ಮಾಡಬಹುದಿತ್ತು. ಬರೀ ಅವೈಜ್ಞಾನಿಕ ಅವೈಜ್ಞಾನಿಕ ಎನ್ನುತ್ತಾರೆ. ಲೋಪದೋಷ ಇದ್ದರೆ ಒಪ್ಪಿಕೊಳ್ಳೊಣ.ಎಲ್ಲಿ ಲೋಪವಾಗಿದೆ ಎಂದು ಸ್ಪಷ್ಟವಾಗಿಲ್ಲ ಎಂದರು.
ಜಾತಿ ಜಣಗತಿಯ ಬಗ್ಗೆ ಮೌನ್ನೆ ಸಚಿವ ಸಂಪುಟದಲ್ಲಿ ಚರ್ಚೆ ಅಪೂರ್ಣವಾಗಿದೆ. ಆ ಚರ್ಚೆ ಮುಂದುವರೆಯುತ್ತದೆ. ಸಚಿವ ಸಂಪುಟದಲ್ಲಿ ಚರ್ಚೆಯಾದ ಮೇಲೆ ಇದರ ಬಗ್ಗೆ ಉತ್ತರಿಸುವೆ. ಜಾತಿ ಗಣತಿಯ ಬಗ್ಗೆ ಯಾವ ಸಚಿವರು ವಿರೋಧ ಮಾಡಿಲ್ಲ. ರಾಜ್ಯದ ಜನರಿಗೆ ಸತ್ಯ ಇಂದಲ್ಲ ನಾಳೆ ಬಹಿರಂಗವಾಗುತ್ತದೆ ಎಂದರು.
ಪ್ರಮುಖ ಸಮುದಾಯ ಕಡೆಗಣಿಸಿದ್ದಾರೆ ಎಂದು ವಿವಿಧ ಮಠಾಧೀಶರ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವ ಸಂಪುಟದಲ್ಲಿ ಚರ್ಚೆ ಮಾಡಿದ ಬಳಿಕ ಇದರ ಬಗ್ಗೆ ಉತ್ತರಿಸುವೆ. ಸಚಿವ ಶಿವಾನಂದ ಪಾಟೀಲ್, ಎಂ.ಬಿ.ಪಾಟೀಲ್ ವಾದ, ವಿವಾದ ಮಾಡಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಯಾರೂ ವಿರೋಧ ಮಾಡಿಲ್ಲ ಎಂದರು.
ಮುಸ್ಲಿಮ್ ಸಮುದಾಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ತೋರಿಸಿ ಪ್ರಭಲ ಸಮುದಾಯ ಒಕ್ಕಲಿಗ, ವೀರಶೈವ ಲಿಂಗಾಯತ ಸಮಾಜ ಕಡಿಮೆ ಸಂಖ್ಯೆ ತೋರಿಸಿದ್ದಾರೆ ಎನ್ನುವ ಆರೋಪಕ್ಕೆ ಉತ್ತರಿಸಿದ ಅವರು, ನಾನೇ ಸಚಿವ ಸಂಪುಟದ ಸಭೆಯಲ್ಲಿ ಇದ್ದೆ.ಯಾವ ಊಹಾಪೋಹಗಳ ಬಗ್ಗೆ ಚರ್ಚೆಯಾಗಿಲ್ಲ. ಎಲ್ಲಾ ವಿಚಾರಗಳನ್ನು ಬೇರೆ ಬೇರೆಯಲ್ಲಿ ಚರ್ಚೆ ಮಾಡಿದ್ದೇವೆ. ಯಾವ ಸಮುದಾಯಕ್ಕೂ ಅನ್ಯಾಯವಾಗಬಾರದು. ಎಲ್ಲ ಸಮುದಾಯಕ್ಕೂ ನ್ಯಾಯ ದೊರಕಿಸಿಕೊಡಬೇಕು ಎಂದು ಚರ್ಚೆಯಾಗಿದೆ ಎಂದರು.
ಬೆಳಗಾವಿ ಪೊಲೀಸರ ತಂಡ ಮೂರೇ ಮೂರು ತಿಂಗಳಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರಿಗೆ ಧ್ಯನವಾದ ತಿಳಿಸುತ್ತೇನೆ ಎಂದರು.
ಸಿಇಟಿ ಪರೀಕ್ಷೆ ವೇಳೆಯಲ್ಲಿ ಜನಿವಾರ ತೆಗೆಸಿದ ಪ್ರಕರಣಕ್ಕೆ ಉತ್ತರಿಸಿದ ಅವರು, ಈ ರೀತಿ ಆಗಬಾರದಿತ್ತು,‌ ಇದು ತಪ್ಪು. ಧಾರವಾಡದಲ್ಲೂ ಬೆಳಕಿಗೆ ಪ್ರಕರಣ ಈ ರೀತಿ ಮಾಡಿದ್ದು ಖಂಡಿತವಾಗಿಯೂ ತಪ್ಪು ಹೀಗಾಗಬಾರದು ಎಂದರು.

Total Views 79
RELATED ARTICLES

Most Popular

Recent Comments

KNN City News
Home
E-Paper