Thursday, November 19, 2026
HomeBelagaviವಿಪಕ್ಷ ನಾಯಕ ಆರ್. ಅಶೋಕ ವಿರುದ್ಧ ಸಿಎಂ ವಾಗ್ದಾಳಿ

ವಿಪಕ್ಷ ನಾಯಕ ಆರ್. ಅಶೋಕ ವಿರುದ್ಧ ಸಿಎಂ ವಾಗ್ದಾಳಿ

ಬೆಳಗಾವಿ

ವಿಪಕ್ಷ ನಾಯಕ ಆರ್. ಅಶೋಕ್ ಯಾವತ್ತು ಸತ್ಯ ಹೇಳಿದ್ದಾರೆ. ಅವರು ಸುಳ್ಳೆ ಹೇಳೋದು ಅಶೋಕ್ ಹಾಗೂ ಬಿಜೆಪಿಯವರು ಸುಳ್ಳನ್ನು ಸತ್ಯ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಭಾನುವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಜಾತಿ ಗಣತಿಯ ಮೂಲ ಪ್ರತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಲ್ಲಿದೆ ಎಂದು ಆರೋಪಿಸಿದ್ದ ಆರ್.ಅಶೋಕ್ ಗೆ ಟಾಂಗ್ ನೀಡಿದರು.
ಸತ್ಯವನ್ನೆ ಸುಳ್ಳು ಮಾಡೋದು ಆರ್. ಅಶೋಕ್ ಅವರಿಗೆ ಆರ್ ಎಸ್ ಎಸ್ ಕಲಿಸಿದೆ ಎಂದರು.
ಜಾತಿಗಣತಿ ಜಾರಿ ವಿಚಾರಕ್ಕೆ ಕೇಂದ್ರ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಪತ್ರ ಬರೆದಿದ್ದಾರಾ ಎಂಬ ಮಾಧ್ಯಮಗಳ ಪ್ರಶ್ನೆ‌ಗೆ ಉತ್ತರಿಸಿದ ಅವರು, ನನಗೆ ರಾಹುಲ್ ಅವರು ಯಾವುದೇ ಪತ್ರ ಬರೆದಿಲ್ಲ. ಅವರೊಂದಿಗೆ ಚರ್ಚೆ ಮಾಡಿದ್ದೇ‌ನೆ. ಅವರ ಒಪ್ಪಿಗೆ ಇಲ್ಲದೆ ಮಂಡಿಸೋಕೆ ಆಗುತ್ತಾ ಎಂದು ಪ್ರಶ್ನೆ ಮಾಡಿದ ಸಿದ್ದರಾಮಯ್ಯ ಪ್ರಶ್ನಿಸಿದರು‌.
ಚನ್ನಗಿರಿ ಕಾಂಗ್ರೇಸ್ ಶಾಸಕರ ವಿರೋಧ ವಿಚಾರಕ್ಕೆ ಉತ್ತರಿಸಿ ಕ್ಯಾಬಿನೇಟ್ ನಲ್ಲಿ ಯಾರೂ ವಿರೋಧ ಮಾಡಿಲ್ಲ. ದೊಡ್ಡ ಗಂಟಲಿನಲ್ಲಿ ಯಾರೂ ಮಾತನಾಡಿಲ್ಲ. ಅಭಿಪ್ರಾಯಗಳನ್ನು ಕೊಟ್ಟ ನಂತರ ಡಿಷಿಜನ್ ತೆಗೆದುಕೊಳ್ಳುತ್ತೆವೆ. ಮಠಾಧೀಶರ ವಿರೋಧದ ಕುರಿತ ಪ್ರಶ್ನೆಯ ಕುರಿತು ಏನನ್ನು ಮಾತನಾಡಲಿಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ, ಸೋಷಿಯೋ ಎಕನಾಮಿಕ್ ಸರ್ವೆ ಎಂದರು. ಸಂವಿಧಾನ ಜಾರಿಗೆ ಬಂದು 75 ವರ್ಷ ಆಯ್ತು ಬಡವ ಬಡವನಾಗಿಯೇ ಇರಬೇಕಾ? ಸಮಾನತೆ ಬರಬೇಕಾ ಬೇಡ್ವಾ. ಮುಸ್ಲಿಂಮರು ಹಾಗೂ ಎಲ್ಲಾ ಜಾತಿಯವರಿಗೆ ಶಿಕ್ಷಣ ಸಿಗಬೇಕಾ ಬೇಡ್ವಾ ಎಂದು ಸಿಎಂ ಪ್ರಶ್ನಿಸಿದರು.
ನಾನು ಇಲ್ಲಿ ಮೆರಿಟ್ ಮೇಲೆ ಮಾತನಾಡಲು ಆಗಲ್ಲ. ಅಭಿಪ್ರಾಯ ಕೇಳಿದ್ದಿವಿ ಯಾರೂ ವಿರೋಧ ಮಾಡಿಲ್ಲ ಅಂತ ಬರೀರಿ ಸಾಕು ಎಂದು ಹೊರಟರು.

ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಭೈರತಿ ಸುರೇಶ್, ಚಲುನಾರಾಯಣಸ್ವಾಮಿ, ಶಾಸಕ ಆಸೀಫ್ ಸೇಠ್, ಅಶೋಕ‌ ಪಟ್ಟಣ, ಚನ್ನರಾಜ ಹಟ್ಟಿಹೊಳಿ‌ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Total Views 105
RELATED ARTICLES

Most Popular

Recent Comments

KNN City News
Home
E-Paper