Thursday, November 19, 2026

ಜಾತಿ ಗಣತಿ: ‘ಮಾದಿಗ’ ಎಂದು ನಮೂದಿಸಲು ಈಶಪ್ಪ ದೊಡ್ಡಮನಿ ಮನವಿ

 

ಕನ್ನಡಮ್ಮನ ಸುದ್ದಿ ಕುಕನೂರ ಜಾತಿ ಗಣತಿಯ ನಮೂನೆಯ

ಕಲಂ 61ರಲ್ಲಿ ‘ಮಾದಿಗ ಸಮುದಾಯ’ ಎಂದು ನಮೂದಿಸಬೇಕು ಎಂದು ತಾ.ಪಂ ಮಾಜಿ ಸದಸ್ಯ ಈಶಪ್ಪ ದೊಡ್ಡಮನಿ . ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳ ಪೈಕಿ ಒಳಮಿಸಲಾತಿ ವರ್ಗೀಕರಣದ ಸಮೀಕ್ಷೆಗೆ ಬರುವ ಅಧಿಕಾರಿಗಳ ಬಳಿ ಯಾವುದೇ ಕಾರಣಕ್ಕೂ ಆದಿ ಕರ್ನಾಟಕ, ಆದಿ ದ್ರಾವಿಡ ಇತ್ಯಾದಿ ಜಾತಿ ಸೂಚಕವಲ್ಲದ ಪದಗಳನ್ನು ಬರೆಸಬಾರದು ಎಂದು ತಿಳಿಸಿದರು.

ಗದಿಗೆಪ್ಪ ಅಜ್ಜನವರ ಮಾತನಾಡಿ, ಮಾದಿಗ ಸಂಬಂಧಿತ ಜಾತಿಗಳು ಸರ್ಕಾರದ ಪ್ರತಿನಿಧಿಗಳು ಜಾತಿ ಸಮೀಕ್ಷೆಗೆ ಬರುತ್ತಿದ್ದು ತಪ್ಪದೆ ಆಯಾ ಗ್ರಾಮದಲ್ಲಿರುವ ವಿದ್ಯಾರ್ಥಿಗಳು, ಯುವಕರು, ಸಂಘಟನೆ ಮುಖಂಡರು ಗ್ರಾಮದ ಯಾವುದೇ ಕುಟುಂಬ ಈ ಜಾತಿ ಸಮೀಕ್ಷೆಯಿಂದ ಹೊರಗುಳಿಯದಂತೆ ಎಚ್ಚರ ವಹಿಸಬೇಕು ಎಂದರು.

ಪರಶುರಾಮ್ ಸಕ್ರಣ್ಣವರ್ ಮಾತನಾಡಿ, ಸಮುದಾಯದ ವಿದ್ಯಾ ವಂತ ಯುವಕರು ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮವಾಗಬೇಕಿದೆ. ದತ್ತಾಂಶ ಸಂಗ್ರಹಕ್ಕಾಗಿ ಜಿಲ್ಲೆಯಲ್ಲಿ ಮೇ 5ರಿಂದ ಮನೆ ಮನೆ ಸಮೀಕ್ಷೆ ನಡೆಯಲಿದೆ ಎಂದರು

ಈ ಸಂದರ್ಭದಲ್ಲಿ ಶರಣಪ್ಪ ಹಲಗಿ, ಸಂಜು, ಶರಣಪ್ಪ ರಾಜೂರ್, ಬಸವರಾಜ ನಡುವಲಮನಿ, ಹನುಮಂತಪ್ಪ, ಗಾಳೆಪ್ಪ ವೀರಾಪೂರ, ವೀರುಪಾಕ್ಷಪ್ಪ ದೊಡ್ಮಿನಿ, ಭೀಮಣ್ಣ ಬೂದಗುಂಪಿ, ಪ್ರಕಾಶ ಉಜ್ಜಮ್ಮನವ‌ರ್, ಬಲವಂತ ಕಲ್ಲೂರ, ಜಂಬಣ್ಣ ನಡುವಲಮನಿ ಸೇರಿದಂತೆ ಇನ್ನಿತರರು ಇದ್ದರು.

ವರದಿ :ಬಸವರಾಜ್ ಕೊಪ್ಪದ ಬಿನ್ನಾಳ

9731225793

Total Views 189
RELATED ARTICLES

Most Popular

Recent Comments

KNN City News
Home
E-Paper