
ಬೆಳಗಾವಿ
ಭಾರತ ಮತ್ತು ಪಾಕಿಸ್ತಾನ ಅಘೋಷಿತ ಯುದ್ಧ ಆರಂಭದ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದಿಂದ ಬೆಳಗಾವಿಗೆ ಭಾನುವಾರ ಬಂದಿಳಿದ ಯೋಧರ ಕುಟುಂಬಸ್ಥರು.
ಪಹಲ್ಲಾಮದಲ್ಲಿ ಭಯೋತ್ಪಾದಕರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಹದಿನೈದು ದಿನದ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವೆ ಅಘೋಷಿತ ಯುದ್ಧ ಆರಂಭವಾದ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದಿಂದ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಭಾರತೀಯ ಸೈನಿಕರ ಕುಟುಂಬ ಅವರ ಮನೆಗೆ ತೆರಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸೈನಿಕನ ಪತ್ನಿ ಸೀಮಾ ನಿಕ್ಕಂ, ಭಾರತೀಯ ಸೈನಿಕರು ತೊಂದರೆಯಲ್ಲಿದ್ದಾರೆ. ಪಾಕಿಸ್ತಾನದ ಜೊತೆ ಯುದ್ಧ ಆಗುವುದು ಬೇಡಾ. ಕಳೆದ ಮೂರು ದಿನಗಳ ಹಿಂದೆ ನಾವು ಜಮ್ಮು ಕಾಶ್ಮೀರದಿಂದ ರೈಲು ಹತ್ತಿ ಪ್ರಯಾಣ ಬೆಳೆಸಿದ್ದೇವು. ಪಾಕಿಸ್ತಾನದ ಗಡಿಯಿಂದ 25 ಕಿ.ಮೀ ದೂರ ಇದ್ದೇವು. ನಮ್ಮ ಯಜಮಾನರು ಯುದ್ಧಕ್ಕೆ ಹೋದರು. ಅವರಿಗೆ ಸಾಕಷ್ಟು ತೊಂದರೆ ಇದೆ. ಯುದ್ಧ ಆಗುವುದು ಬೇಡ ಎಂದರು.
ಅಶ್ವಿನಿ ಹಳ್ಳಿಗೇರಿ ಮಾತನಾಡಿ, ಜಮ್ಮುದಲ್ಲಿ ಸೈರನ್ ಸದ್ದು ಬಂದರೆ ಭಯದಿಂದ ಓಡಿ ಹೋಗಿ ಕೆಳಗಡೆ ಕತ್ತಲಿನಲ್ಲಿ ಕುಳಿತುಕೊಳ್ಳಬೇಕಾಗುತ್ತಿತ್ತು. ಜಮ್ಮು ಕಾಶ್ಮೀರ ಗಡಿಯಲ್ಲಿ ಈಗ ಭಯದ ವಾತಾವರಣ ಇದೆ. ನಮ್ಮ ಯಜಮಾನರಿಗೆ ಬಿಟ್ಟು ಬರಲು ಮನಸ್ಸು ಇರಲಿಲ್ಲ. ಆದರೆ ಎಲ್ಲರನ್ನೂ ಮನೆಗೆ ಕಳುಹಿಸುತ್ತಿದ್ದಾರೆ. ಅದಕ್ಕೆ ಮಾವು ವಾಪಸ್ಸ ಬಂದೇವು ಎಂದರು.
