
ಬೆಳಗಾವಿ
ಇಲ್ಲಿನ ಕಾಳಿ ಅಂಬ್ರಾಯಿಯಲ್ಲಿರುವ ಹ್ಯಾಥ್‌ವೇ ಕಚೇರಿಯ ಹಾಡಹಗಲೇ 8 ಜನ ಮಹಿಳೆಯರು ಸೇರಿಕೊಂಡು ಲಕ್ಷಾಂತರ ರೂ. ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿರುಗ ಘಟನೆ ಭಾನುವಾರ ನಡದಿದೆ.
ಚಿಂದಿ ಆರಿಸುವ ಮಹಿಳೆಯರು ಕಳ್ಳತನ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಹ್ಯಾಥ್‌ವೇ ಕಚೇರಿಯ ಗೋ ಡೌನ್ ನಲ್ಲಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ಎರಡು ಬ್ಯಾಟರಿ, ನಾಲ್ಕು ಸಾಕೇಟ್, ಸಣ್ಣ ಪುಟ್ಟ ಕೇಬಲ್ ಸೇರಿದಂತೆ ಅಂದಾಜು 4 ಲಕ್ಷ 50 ಸಾವಿರ ರೂ. ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಕಳ್ಳತನ ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸ್ಥಳಕ್ಕೆ ಕ್ಯಾಂಪ್ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

