Friday, November 20, 2026
HomeBelagaviಯುವಕರು ಸೈಬರ್ ವಂಚನೆಯಿಂದ ದೂರ ಇರಿ: ಶಿಂಧೆ

ಯುವಕರು ಸೈಬರ್ ವಂಚನೆಯಿಂದ ದೂರ ಇರಿ: ಶಿಂಧೆ

ಬೆಳಗಾವಿ
ಯುವಕರು ಆನ್ ಲೈನ್ ಕ್ಲಾಸ್ ನಡೆದಾಗ ಸೈಬರ್ ಕ್ರೈಮ್ ಬಗ್ಗೆ ಜಾಗರುಕತೆ ವಹಿಸಬೇಕು ಎಂದು ಸೈಬರ್ ಕ್ರೈಮ್ ಎಎಸ್ಐ ಶಂಕರ ಶಿಂಧೆ ಹೇಳಿದರು.
ಶುಕ್ರವಾರ ಸೈಬರ್ ಕ್ರೈಮ್ ಬಗ್ಗೆ ಯುವಕರಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವಕರು ಸೈಬರ್ ವಂಚನೆಯಿಂದ ದೂರ ಇರಬೇಕು. ಇತ್ತೀಚಿನ ದಿನಮಾನಗಳಲ್ಲಿ ಸೈಬರ್ ಕ್ರೈಮ್ ಗಳ ಹಾವಳಿ ಹೆಚ್ಚಾಗಿದೆ. ಅದನ್ನು ತಡೆಯುವಲ್ಲಿ ಪೊಲೀಸರು ನಿರಂತರವಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಆನ್ ಲೈನ್ ವಂಚನೆಯ ಬಗ್ಗೆ ಯುವಕರು ಎಚ್ಚರಿಕೆಯಿಂದ ಇರಬೇಕು ಎಂದರು.
ಸೈಬರ್ ವಂಚಕರು ಸದಾ ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾಶೀಲರಾಗಿರುತ್ತಾರೆ. ನಿಮ್ಮ ಚಲನವಲದ ಮೇಲೆ ಗಮನ ಇರುತ್ತದೆ. ಯುವಕರು ನೋಡಿಕೊಂಡು ಸಾಮಾಜಿಕ ಜಾತಾಣವನ್ನು ಬಳಸಿಕೊಳ್ಳಬೇಕು ಎಂದರು‌.
ಸೈಬರ್ ಕ್ರೈಮ್ ಸಿಬ್ಬಂದಿ ಕಾಡಯ್ಯ ಕರಲಿಂಗಮಠ ಮಾತನಾಡಿ, ಸೈಬರ್ ಕ್ರೈಮ್ ಮಾಡುವವರು ನಿಮ್ಮ ಮೊಬೈಲ್ ನಿಂದ ಸಾಮಾಜಿಕ ಜಾಲತಾಣದಲ್ಲಿ ಗಮನಿಸುತ್ತಿರುತ್ತಾರೆ. ನೀವು ಹಂಚಿಕೊಳ್ಳುವ ಮಾಹಿತಿಯ ಜಾಡು ಹಿಡಿದು ನೀವು ಮನೆಯಲ್ಲಿ ಇರದೆ ಇರುವುದನ್ನು ಗಮನಿಸಿ ಮನೆಗಳ್ಳತನವಾಗುವ ಸಂಭವವೂ ಹೆಚ್ವಿರುತ್ತದೆ. ನಿಮ್ಮ ಕೈಯಲ್ಲಿ ಮೊಬೈಲ್ ಇರುವುದರಿಂದ ಅದು ಮಾರಕವಾಗುತ್ತಿದೆ. ಅದನ್ನು ಜಾಗುರುಕತೆಯಿಂದ ಬಳಕೆ ಮಾಡಿಕೊಳ್ಳಬೇಕು ಎಂದರು.
ಯುವಕರು ಸಾಮಾಜಿಕ ಜಾಲತಾಣದಲ್ಲಿ ಬೇರೆಯವರ ಅನುಮತಿ ಪಡೆಯದೆ ಫೋಟೋ ಹರಿಬಿಟ್ಟರೆ ಅದು ಸೈಬರ್ ಕ್ರೈಮ್ ಆಗುತ್ತದೆ. ತಮಾಷೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರೆ ಪೋಸ್ಟ್ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

Total Views 166
RELATED ARTICLES

Most Popular

Recent Comments

KNN City News
Home
E-Paper