Monday, November 23, 2026
HomeBelagaviನಿವೃತ್ತ ಎಎಸ್ಐ ಪಾಟೀಲ್ ನಿಧ‌ನ

ನಿವೃತ್ತ ಎಎಸ್ಐ ಪಾಟೀಲ್ ನಿಧ‌ನ

ಬೆಳಗಾವಿ
ಕೆಲ ದಿನಗಳ‌ ಹಿಂದಷ್ಟೇ ಸೇವಾ ನಿವೃತ್ತಿ ಎಎಸ್ಐ ಎಸ್.ಎನ್.ಪಾಟೀಲ್ ಅನಾರೋಗ್ಯದಿಂದ ಶುಕ್ರವಾರ ನಿಧನರಾದರು.
ಮಾರ್ಕೆಟ್ ಪೊಲೀಸ್ ಠಾಣೆ ಸೇರಿದಂತೆ ನಗರ ಪೊಲೀಸ್ ಇಲಾಖೆಯ ವಿವಿಧ ಠಾಣೆಯಲ್ಲಿ ಸೇವೆ ಮಾಡಿದ್ದ ಪಾಟೀಲ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇಲ್ಲಿನ ವೀರಭದ್ರೇಶ್ವರ ನಗರದಲ್ಲಿ ಬಾಡಿಗೆ ಮನೆ ಮಾಡಿ ವಾಸವಿದ್ದ ಅವರು. ನಿನ್ನೆ ಅಷ್ಟೆ ಅವರ ಚಚಡಿ ಗ್ರಾಮಕ್ಕೆ ಮನೆಯವರು ಕರೆದುಕೊಂಡು ಹೋಗಿದ್ದರು. ಇದಕ್ಕೂ ಮುನ್ನ ಮಾರ್ಕೆಟ್, ಎಪಿಎಂಸಿ ಪೊಲೀಸರು ಬಂದು ಪಾಟೀಲರ ಆರೋಗ್ಯ ವಿಚಾರಿಸಿದ್ದರು. ಇಂದು ನಿಧನರಾಗಿದ್ದಾರೆ. ಮೃತರು ತಮ್ಮ ಹಿಂದೆ ಪತ್ನಿ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.

Total Views 655
RELATED ARTICLES

Most Popular

Recent Comments

KNN City News
Home
E-Paper