
ಬೆಳಗಾವಿ
ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಹಾಗೂ ಸಿಇಎನ್ ಸಿಪಿಐ ಗಡ್ಡೇಕರ್ ಅವರಿಗೆ ಡಿಜಿ ಮತ್ತು ಐಜಿಪಿ ಮೆಡಪ್ ಒಲಿದು ಬಂದಿದೆ.
ನಗರ ವ್ಯಾಪ್ತಿಯಲ್ಲಿ ಇಬ್ಬರು ಅಧಿಕಾರಿಗಳಿಗೆ ಈ ಮೆಡಲ್ ಸಿಕ್ಕಿದ್ದು ಅವರ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. 2024-25ರ ಸೇವೆಯನ್ನ ಪರಿಗಣಿಸಿ ಈ ಮೆಡಲ್ ನೀಡಲಾಗಿದ್ದು, ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಬೆಂಗಳೂರಿನಲ್ಲಿ ಇದೇ ಮೇ.21ರಂದು ಅವಾರ್ಡ್ ನೀಡಿ ಗೌರವಿಸಲಾಗುತ್ತೆ. ಪಿಐ ಗಡ್ಡೇಕರ್ ಅವರಿಗೆ ಒಂದೇ ವರ್ಷದಲ್ಲಿ ಎರಡೂ ಅವಾಡ್೯ ಬಂದಿದ್ದು ವಿಶೇಷವಾಗಿದೆ.
