Monday, November 23, 2026
HomeBelagaviಮಳೆ ತಂದ ಅವಾಂತರ: ವೃದ್ಧೆ ಸಾವು: ಮಳೆ ನೀರಿಗೆ ಕೊಚ್ಚಿ ಹೋದ ಆಟೋ ಚಾಲಕ

ಮಳೆ ತಂದ ಅವಾಂತರ: ವೃದ್ಧೆ ಸಾವು: ಮಳೆ ನೀರಿಗೆ ಕೊಚ್ಚಿ ಹೋದ ಆಟೋ ಚಾಲಕ

ಬೆಳಗಾವಿ
ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯಲ್ಲಿ ಸಾಕಷ್ಟು ಸಾವು ನೋವು ಸಂಭವಿಸುತ್ತಿದ್ದು ಎರಡು ಪ್ರತ್ಯೇಕ ದುರ್ಘಟನೆಗಳು ಜಿಲ್ಲೆಯಲ್ಲಿ ನಡೆದಿವೆ.
ಬೆಳಗಾವಿಯಲ್ಲಿ ಸುರಿದ ಧಾರಾಕಾರ ಮಳೆಗೆ ಆಟೋ ಚಾಲಕ ಕೊಚ್ಚಿಕೊಂಡು ‌ಹೋದ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಚಿಕ್ಕಬೂದನೂರ ಗ್ರಾಮದಲ್ಲಿ ನಡೆದಿದೆ.
ಮಳೆರಾಯನ ಅರ್ಭಟದಿಂದ ರಾತ್ರಿ ತುಂಬಿ ಹರಿಯುತ್ತಿದ್ದ ಗ್ರಾಮದ ಹೊರ ವಲಯದ ಹಳ್ಳ. ಆಟೋ ದಾಟಿಸುವಾಗ ನೀರಿನ ರಭಸಕ್ಕೆ ಆಟೋ ಸಮೇತ ಚಾಲಕ ನೀರಿನಲ್ಲಿ ತೇಲಿ ಹೋಗಿದ್ದರಿಂದ ಆಟೋ ಚಾಲಕನಿಗಾಗಿ ಹಗ್ಗ ಬಿಟ್ಟು ಗ್ರಾಮಸ್ಥರ ಹುಡುಕಾಟ ನಡೆಸಿದ್ದಾರೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇನ್ನೂ ಗೋಕಾಕ ತಾಲೂಕಿನ ಚಿಕ್ಕನಂದಿ ಗ್ರಾಮದಲ್ಲಿ ಮಣ್ಣಿನ ಗೋಡೆ ಕುಸಿದು ಬಿದ್ದು ವೃದ್ದೆ ಮೃತಪಟ್ಟಿದ್ದಾರೆ. ಚಿಕ್ಕನಂದಿ ಗ್ರಾಮ.
ಫಕ್ಕೀರವ್ವ ಹಾವೇರಿ(65) ಮೃತ ದುರ್ದೈವಿ. ಗೋಡೆಯ ಕೆಳಗೆ ಸಿಲುಕಿದ ಫಕ್ಕೀರವ್ವಗೆ ಕೂಡಲೇ ಹೊರ ತೆಗೆದ ಸ್ಥಳೀಯರು.
ಅಷ್ಟರಲ್ಲೇ ಮೃತಪಟ್ಟಿದ್ದಳು. ಮರಣೋತ್ತರ ಪರೀಕ್ಷೆಗೆ ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ಶವ ರವಾನೆ.ಗೋಕಾಕ್ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

Total Views 156
RELATED ARTICLES

Most Popular

Recent Comments

KNN City News
Home
E-Paper