
ಬೆಳಗಾವಿ
ಹುಕ್ಕೇರಿ ತಾಲೂಕಿನ ಪಾಶ್ಚಾಪುರ ಗ್ರಾಂದ ಜಮೀನಿನಲ್ಲಿ ಕುರಿಗಾಹಿ ಅಣ್ಣನ ಕೊಲೆ ಮಾಡಿದ್ದ ಸಹೋದರನನ್ನು ಯಮಕನಮರಡಿ ಪೊಲೀಸ್ ಠಾಣೆಯ ಸಿಪಿಐ ಜಾವೇದ್ ಮುಷಾಪುರೆ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುವೈತನ್ ಖಾಸಗಿ ಕಂಪನಿಯಲ್ಲಿ ವಾಲ್ ಆಪರೇಟರ್ ಕೆಲಸ ಮಾಡುತ್ತಿದ್ದ ಅಣ್ಣನನ್ನು ಕೊಲೆ ಮಾಡಿದ ಸಹೋದರ ರಾಯಪ್ಪ ಕುರಿ ಕಾಯಲು ಹೋದ ಬಸವರಾಜನನ್ನು ಕೊಲೆ ಮಾಡಿದ್ದ. ಎಂದಿನAತೆ ಮೇ.8 ರಂದು ಕುರಿ ಮೇಯಿಸಲು ಹೋದ ಸಂದರ್ಭದಲ್ಲಿ ಕುರಿಗಳು ಮನೆಗೆ ಬಂದರೂ ರಾಯಪ್ಪ ಮನೆಗೆ ಬಾರದೆ ಇರುವುದನ್ನು ಕಂಡು ಮನೆಯವರು ಯಮಕನಮರಡಿ ಪೊಲೀಸ್ ಠಾಣೆಗೆ ಕಾಣೆಯಾಗಿದ್ದಾನೆ ಎಂದು ದೂರು ದಾಖಲು ಮಾಡುತ್ತಾರೆ.
ಆದರೆ ಕುರಿ ಮೇಯಿಸಲು ಬಿಟ್ಟು ಮೊಬೈಲ್‌ನಲ್ಲಿ ರಿಲ್ಸ್ ನೋಡುತ್ತ ಕಾಲ ಕಳೆಯುತ್ತಿದ್ದ ರಾಯಪ್ಪನಿಗೆ ಬಸವರಾಜ ಕಣ್ಣಿಗೆ ಕಾರದ ಪುಡಿ ಹಾಕಿ ಕೊಲೆ ಮಾಡಿದ್ದ. ಆರೋಪಿಯನ್ನು ಹಿಡಿಯಲು ಯಮಕನಮರಡಿ ಪೊಲೀಸ್ ಠಾಣೆಯ ಸಿಪಿಐ ಜಾವೇದ್ ಮುಷಾಪುರೆ ನೇತೃತ್ವದ ತಂಡ ಎಲ್ಲ ಆಯಾಮದಲ್ಲಿ ತನಿಖೆ ನಡೆಸಿ ಬಸವರಾಜನನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ್ ಹೇಳಿದರು.

ಘಟನೆ ವಿವರ: ಪೊಲೀಸರಿಗೆ ಸವಾಲ್ ಆಗಿದ್ದ ಕುರಿಗಾಹಿ ಕೊಲೆ ಪ್ರಕರಣವನ್ನು ಸಿಪಿಐ ಜಾವೇದ್ ಮುಷಾಪುರಿ ನೇತೃತ್ವದ ತಂಡ ಕುರಿಗಳ ಜೊತೆಗೆ ನಾಯಿಯನ್ನು ಕರೆದುಕೊಂಡು ತನಿಖೆ ನಡೆಸಿದಾಗ ಇನ್ನೊಂದು ನಾಯಿಯನ್ನು ಮುಚ್ಚಿಟ್ಟ ಬಸವರಾಜನ ಮೇಲೆ ಅನುಮಾನ ಬಂದು ಪೊಲೀಸರು ವಿಚಾರಣೆ ನಡೆಸಿದಾಗ ರಾಯಪ್ಪನನ್ನು ತಾನೆ ಕೊಲೆ ಮಾಡಿರುವುದಾಗಿ ಪೊಲೀಸ್ ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
