Monday, November 23, 2026
HomeBelagaviನಾಳೆ ಹುಕ್ಕೇರಿ ಹಿರೇಮಠದ ಸಾಮಾಜಿಕ ಕೊಡುಗೆಗಳ ಇಂಗ್ಲಿಷ್ ಅನುವಾದದ ಕೃತಿ ಬಿಡುಗಡೆಗೊಳಸಲಿರುವ ಪರಮಶಿವಮೂರ್ತಿ

ನಾಳೆ ಹುಕ್ಕೇರಿ ಹಿರೇಮಠದ ಸಾಮಾಜಿಕ ಕೊಡುಗೆಗಳ ಇಂಗ್ಲಿಷ್ ಅನುವಾದದ ಕೃತಿ ಬಿಡುಗಡೆಗೊಳಸಲಿರುವ ಪರಮಶಿವಮೂರ್ತಿ

ಬೆಳಗಾವಿ
ಹಂಪಿ ಕನ್ನಡ ವಿಶ್ವವಿದ್ಯಾನಿಯಲಕ್ಕೆ ಪ್ರೊ. ಶಿವಲೀಲಾ ಹಿರೇಮಠ ನೀಡಿದ ಹುಕ್ಕೇರಿ ಹಿರೇಮಠದ ಸಾಮಾಜಿಕ ಮತ್ತು ಸಂಸ್ಕೃತಿಕ‌ ಕೊಡುಗೆಗಳು ಗ್ರಂಥದ ಇಂಗ್ಲಿಷ್ ಅನುವಾದದ ಕೃತಿಯನ್ನು ಹಂಪಿ ಕನ್ನಡ ವಿವಿಯ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಅವರು ಜು.9 ರಂದು ಬೆಳಗ್ಗೆ 10.30ಕ್ಕೆ ಲಕ್ಷ್ಮೀ ಟೆಕಡಿಯಲ್ಲಿರುವ ಗುರುಶಾಂತೇಶ್ವರ ಸಂಸ್ಥಾನದ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಬಿಡುಗಡೆಗೊಳಿಸಲಿದ್ದಾರೆ.
ಡಾ. ಗುರುದೇವಿ ಹುಲೇಪ್ಪನವರಮಠ, ಪ್ರೊ.ರೀಟಾ ಬಣಗಾರ ಇವರು ಇಂಗ್ಲಿಷ್ ಅನುವಾದ ಮಾಡಿರುವ ಕೃತಿ ಇದ್ದಾಗಿದ್ದು, ಈ ಕೃತಿ ಪರಿಚಯವನ್ನು ಪ್ರೊ. ಎಸ್.ಗಂಗಾಧರಯ್ಯ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಡಾ. ವಿ.ಎಸ್.ಮಾಳಿ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶಿವಲೀಲಾ ಹಿರೇಮಠ, ಶಾಲಿನಿ‌ ದೊಡಮನಿ‌ ಅವರು ಉಪಸ್ಥಿತರಿರಲಿದ್ದಾರೆ. ಸಾನ್ನಿದ್ಯವನ್ನು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ವಹಿಸಲಿದ್ದಾರೆ.

Total Views 34
RELATED ARTICLES

Most Popular

Recent Comments

KNN City News
Home
E-Paper