
ಬೆಳಗಾವಿ
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕಲಿಕೆಗೆ ಹೆಚ್ಚು ಒತ್ತು ಕೊಡುತ್ತೇವೆ.
ಬಜೆಟ್ ನಲ್ಲಿ ಕೊಟ್ಟಿರುವ ಅನುದಾನ ಇಂಪ್ಲಿಮೆಂಟ್ ಆದಷ್ಟು ಬೇಗ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿಬಿಎಸ್ಇ ಮಾದರಿಯಲ್ಲಿ ಶಿಕ್ಷಣ ನೀತಿ ಜಾರಿ ಪ್ರಶ್ನೆಗೆ ಉತ್ತರಿಸಿದ ಅವರು, ಸಿಬಿಎಸ್ಸಿ ಅವರೇ ನಮ್ಮನ್ನು ಕಾಪಿ ಹೊಡೆದಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಸ್ತಾವನೆ ಸಲ್ಲಿಸಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರು ನಮಗೆ ಹೇಳಲು ಆಗುವುದಿಲ್ಲ. ನಮ್ಮದು ಸ್ಟೇಟ್ ಎಜುಕೇಷನ್ ಪಾಲಿಸಿ ಇದೆ. ಶಿಕ್ಷಣ ನೀತಿ ಯಾವ ರೀತಿ ಇರಬೇಕು ಹೇಗಿರಬೇಕು ಅಂತಾ ಚರ್ಚೆ ಮಾಡ್ತೇವಿ ಎಂದರು.
ಎನ್ಇಪಿ ಯನ್ನ ನಾವು ಒಪ್ಪದಿರುವುದರಿಂದ. ನಮ್ಮ ಶಿಕ್ಷಣ ನೀತಿ ಚೆನ್ನಾಗಿರುವುದರಿಂದ. ನಮ್ಮ ಪಾಲಿಸಿಯನ್ನ ಸಿಬಿಎಸ್ಸಿ ದವರು ಕಾಪಿ ಹೊಡೆದಿದ್ದಾರೆ. ವೆಬ್ ಕಾಸ್ಟಿಂಗ್ ಭಾರತದಲ್ಲಿ ಮಾಡಿದ್ದೇ ಕರ್ನಾಟಕ. ರೀ ಎಕ್ಸಾಮ್ ಪಾಲಿಸಿ ಮಾಡಿ ಅತೀ ಹೆಚ್ಚು ಮಕ್ಕಳು ಎರಡನೇ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ.ನಮ್ಮ ಇಲಾಖೆ ಜವಾಬ್ದಾರಿಯುತವಾಗಿ ಕೆಲಸ ಮಾಡಿದೆ ಎಂದರು.
